ಕಾರೂ ಇಲ್ಲ, ಹಣವೂ ಪಂಗನಾಮ!

A man cheated 2.70 lakhs while buying 2nd hand vehicle!

06-08-2018

ಬೆಂಗಳೂರು:  ಒ.ಎಲ್.ಎಕ್ಸ್ ಲ್ಲಿ ಇನ್ನೋವ ಕಾರನ್ನು ಕಡಿಮೆ ಬೆಲೆಗೆ ಹಾಕಿರುವುದನ್ನು ನೋಡಿ ಬುಕ್ ಮಾಡಿದ ವ್ಯಕ್ತಿಯೊಬ್ಬರು 2.70 ಲಕ್ಷ ರೂ.ವಂಚನೆಗೊಳಗಾಗಿರುವ ಪ್ರಕರಣವನ್ನು ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದಾರೆ.

ಕಾರು ಖರೀದಿ ಮಾಡಲು ಮುಂದಾಗಿದ್ದ ನವೀನ್ ಎಂಬುವರು ಕಳೆದ ತಿಂಗಳ 17ರಂದು :  ಒ.ಎಲ್.ಎಕ್ಸ್ ನಲ್ಲಿ ಹುಡುಕಾಟ ನಡೆಸಿದಾಗ ಕಡಿಮೆ ಬೆಲೆಗೆ ಇನ್ನೋವಾ ಕಾರು ಹಾಕಿರುವುದು ಕಂಡುಬಂದಿದೆ.  ಓ.ಎಲ್.ಎಕ್ಸ್ ನಲ್ಲಿದ್ದ ಇನ್ನೋವಾ ಕಾರು  ಮಾರಾಟಗಾರ ಹಾಕಿದ್ದ ನಂಬರಿಗೆ ಕರೆ ಮಾಡಿದಾಗ ಅಪರಿಚಿತ ವ್ಯಕ್ತಿ 2.70 ಲಕ್ಷ ರೂಪಾಯಿಗೆ ಕಾರು ನೀಡುವುದಾಗಿ ತಿಳಿಸಿದ್ದಾನೆ. ನಂತರ ಕಾರ್ ಫೋಟೋ ಕಳುಹಿಸಿ ಬ್ಯಾಂಕ್ ಅಕೌಂಟ್ ನಂಬರ್ ಕಳುಹಿಸಿ ಹಣ ಹಾಕುವಂತೆ ತಿಳಿಸಿದ್ದಾನೆ.

ನಾನು ಆತ ಕಳುಹಿಸಿದ್ದ ಅಕೌಂಟ್ ನಂಬರಿಗೆ ಹಣ ಹಾಕಿ ಆತನಿಗೆ ಫೋನ್ ಮಾಡಿದಾಗ ಮೊಬೈಲ್ ನಂಬರ್ ಸ್ವಿಚ್ ಆಫ್ ಬರುತ್ತಿತ್ತು. ಅಕೌಂಟ್ ನಂಬರ್ ಚೆಕ್ ಮಾಡಿದರೆ ಅಸ್ಸಾಂ ರಾಜ್ಯದ ಬ್ಯಾಂಕ್ ಖಾತೆಯೊಂದನ್ನು ತೋರಿಸುತ್ತಿದೆ ಎಂದು ನವೀನ್ ಹೇಳಿದ್ದಾರೆ.

ಮೋಸ ಹೋಗಿರುವ ನವೀನ್ ಪೋಲೀಸರಿಗೆ ದೂರು ನೀಡಿದ್ದಾರೆ. ಯಾರು ಈ ರೀತಿ ಮೋಸ ಹೋಗಬೇಡಿ. ಎಷ್ಟೇ ಜಾಗೃತಿ ಮೂಡಿಸಿದರು ಆನ್ ಲೈನ್ ದೋಖಾ ಪ್ರಕರಣಗಳು ಹೆಚ್ಚಾಗುತ್ತಿದೆ. ಈಗ ಬಗ್ಗೆ ಸೈಬರ್ ಕ್ರೈಂ ಪೊಲೀಸರು ಆರೋಪಿಗಳನ್ನ ಪತ್ತೆಹಚ್ಚಿ ಸರಿಯಾದ ಕ್ರಮ ಜರುಗಿಸಿ ಎಂದು ನವೀನ್ ಮನವಿ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

OLX Money ಸೈಬರ್ ಕ್ರೈಂ ಆರೋಪಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ