ಶಾಲಾ ಮಕ್ಕಳನ್ನೇ ಕಾರ್ಮಿಕರನ್ನಾಗಿಸಿಕೊಂಡ ಗುತ್ತಿಗೆದಾರ!

compound construction: Contractors who employed school children!

06-08-2018

ಕೊಪ್ಪಳ: ಸರ್ಕಾರಿ ಶಾಲಾ ಮಕ್ಕಳನ್ನು ಶಾಲೆಯ ಕಂಪೌಂಡ್ ನಿರ್ಮಾಣ ಕಾಮಗಾರಿಯಲ್ಲಿ ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ. ಮಕ್ಕಳನ್ನು ಶಾಲೆಗೆ ಕಳುಹಿಸುವುದು, ವಿದ್ಯೆ ಕಲಿಯಲು, ಜ್ಞಾನವನ್ನು ಪಡೆಯಲು. ಆದರೆ, ಇಲ್ಲಿ ನಡೆದಿರುವುದೇ ಬೇರೆ, ಹಣದಾಸೆಗೆ ಮಕ್ಕಳನ್ನೇ ಕೂಲಿ ಕಾರ್ಮಿಕರಂತೆ ದುಡಿಸಿಕೊಂಡಿದ್ದಾರೆ ಗುತ್ತಿಗೆದಾರರು. ಈ ರೀತಿಯ ಘಟನೆಯು ಕಂಡು ಬಂದಿರುವುದು ಕೊಪ್ಪಳದ ಯಲಬುರ್ಗಾ ತಾಲ್ಲೂಕಿನ ವಣಗೇರಿಯಲ್ಲಿ ಗ್ರಾಮದಲ್ಲಿ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳನ್ನು ಕಂಪೌಂಡ್ ನಿರ್ಮಾಣ ಕಾಮಗಾರಿಯಲ್ಲಿ ಬಳಸಿಕೊಂಡು ಅಮಾನವೀಯತೆ ತೋರಿದ್ದಾರೆ.  

ಗ್ರಾಮ ಪಂಚಾಯತಿ ಅನುದಾನದಿಂದಲೇ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಕಾರ್ಮಿಕರನ್ನ ಕರೆತಂದರೆ ಕೂಲಿ ಕೊಡಬೇಕಾಗುತ್ತದೆ ಎಂಬ ಹಣದಾಸೆಯಿಂದ ಈ ರೀತಿ, ಮಕ್ಕಳನ್ನೇ ಕಾರ್ಮಿಕರನ್ನಾಗಿ ಬಳಕೆ ಮಾಡಿಕೊಂಡಿದ್ದಾರೆ. ಗುತ್ತಿಗೆದಾರರ ಈ ಕ್ರಮಕ್ಕೆ ಮಕ್ಕಳ ಪೋಷಕರು, ಗ್ರಾಮಸ್ಥರು ತೀವ್ರ ಆಕ್ರೋಶಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ