ಅರಣ್ಯಾಧಿಕಾರಿ ಮೇಲೆ ರೆಸಾರ್ಟ್ ಮಾಲೀಕನಿಂದ ಹಲ್ಲೆ!

Resort owner attacked on forester officer!

06-08-2018

ಚಾಮರಾಜನಗರ: ಅಕ್ರಮ ರೆಸಾರ್ಟ್ ವಿರುದ್ಧ ಕ್ರಮ ಕೈಗೊಂಡು, ನೋಟಿಸ್ ನೀಡಲು ಹೋದ ಅಧಿಕಾರಿ ಮೇಲೆ ಖಾಸಗಿ ರೆಸಾರ್ಟ್ ಮಾಲೀಕ ಹಲ್ಲೆ ಮಾಡಿರುವ ಘಟನೆ ಚಾಮರಾಜ ನಗರದಲ್ಲಿ ನಡೆದಿದೆ. ಆರ್.ಎಫ್.ಒ ಪುಟ್ಟಸ್ವಾಮಿ ಎಂಬುವರ ಮೇಲೆ ನಿರ್ಮಾಣ ಹಂತದ ರೆಸಾರ್ಟ್ ಮಾಲೀಕ ಬಿ.ಸುನೀಲ್ ಎಂಬುವರು ಹಲ್ಲೆ ಮಾಡಿರುವುದು ತಿಳಿದು ಬಂದಿದೆ.

ಬಂಡೀಪುರ ಪರಿಸರ ಸೂಕ್ಷ್ಮವಲಯದಲ್ಲಿ ವಾಣಿಜ್ಯೀಕರಣ ಉಪಯೋಗಕ್ಕಾಗಿ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಆದರೆ ನಿಯಮಗಳನ್ನು ಗಾಳಿಗೆ ತೂರಿರುವ ರೆಸಾರ್ಟ್ ಮಾಲೀಕ, ಗುಂಡ್ಲುಪೇಟೆ ತಾಲ್ಲೂಕಿನ ಗೋಪಾಲಸ್ವಾಮಿ ಬೆಟ್ಟದ ವ್ಯಾಪ್ತಿಯಲ್ಲಿ ರೆಸಾರ್ಟ್ ನಿರ್ಮಿಸಲಾಗುತ್ತಿದ್ದು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅಕ್ರಮ ರೆಸಾರ್ಟ್ ವಿರುದ್ಧ ತೆರವು ನೋಟಿಸ್ ನೀಡಲು ಹೋದ ಅಧಿಕಾರಿ ಮೇಲೆ ಹಲ್ಲೆ  ಮಾಡಲಾಗಿದೆ. ಘಟನೆ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

R.F.O Resorts ಬಂಡೀಪುರ ಪರಿಸರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ