ಪೆಟ್ರೋಲ್ ಬಂಕ್ ಗೆ ನುಗ್ಗಿ ಮ್ಯಾನೇಜರ್ ಮೇಲೆ ಹಲ್ಲೆ

8 people gang assault on petrol bunk manager

06-08-2018 263

ಬಾಗಲಕೋಟೆ: ಬೈಕ್ ಮತ್ತು ಕಾರಿನಲ್ಲಿ ಬಂದ 8 ಮಂದಿ ಪುಡಾರಿಗಳು ಪೆಟ್ರೋಲ್ ಬಂಕ್ ಗೆ ನುಗ್ಗಿ ಕಾರ್ಮಿಕರು ಮತ್ತು ಮ್ಯಾನೇಜರ್ ಮೇಲೆ ಹಲ್ಲೆ ಮಾಡಿರುವ ಘಟನೆ, ಜಿಲ್ಲೆಯ ಮುಧೋಳ ತಾಲ್ಲೂಕಿನ ಲೋಕಾಪುರ ಗ್ರಾಮದ ಬಳಿಯ ಭಾರತ್ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ. ನಿನ್ನೆ ರಾತ್ರಿ 12.30ರ ಸುಮಾರಿಗೆ ಪೆಟ್ರೋಲ್ ಬಂಕ್ ಗೆ ನುಗ್ಗಿದ ಎಂಟು ಜನರ ಗ್ಯಾಂಗ್, ಪೆಟ್ರೋಲ್ ಬಂಕ್ ನ ಕಾರ್ಮಿಕರು, ಮ್ಯಾನೇಜರ್ ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಲ್ಲೆ ನಡೆಸಿದ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎನ್ ಫೀಲ್ಡ್ ಬೈಕ್, ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಪುಡಾರಿಗಳು ಈ ಕೃತ್ಯ ಎಸಗಿದ್ದಾರೆ. ಪೊಲೀಸರು ಬರುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ ದುಷ್ಕರ್ಮಿಗಳು. ಮ್ಯಾನೇಜರ್ ಸಂಗಮೇಶ್ ಸಣ್ಣಕ್ಕಿ, ಕಾರ್ಮಿಕರಾದ ಮಲ್ಲಿಕಾರ್ಜುನ ಮೋಟಗಿ, ಶಿವು ಚಂದರಗಿ, ಶಿವಪ್ಪ ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಬಂದ ಲೋಕಾಪುರ ಪೊಲೀಸರು, ಹಲ್ಲೆಗೈದವರಲ್ಲಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಹಲ್ಲೆ ಮಾಡಿದವರು ಲೋಕಾಪುರ, ಬಂಟನೂರ, ಬುದ್ನಿ ಗ್ರಾಮದವರು ಎಂದು ತಿಳಿದು ಬಂದಿದೆ. ಮಲ್ಲಿಕಾರ್ಜುನ ವಿರಕ್ತಮಠ, ಶಿವಯ್ಯ ವಿರಕ್ತಮಠ, ವೀರೇಶ್ ಪಂಚಗಟ್ಟಿಮಠ, ಅಯ್ಯಪ್ಪಗೌಡ ಪಾಟಿಲ್, ಪ್ರಶಾಂತ ಪಾಟಿಲ್, ಪ್ರಕಾಶ್ ಚಿತ್ತರಗಿ ಹಲ್ಲೆ ಮಾಡಿದವರು ಎಂದು ತಿಳಿದು ಬಂದಿದೆ. ಪ್ರಕರಣ  ದಾಖಲಿಸಿಕೊಂಡಿರುವ ಪೊಲೀಸರು ಮಿಕ್ಕವರಿಗಾಗಿ ಬಲೆ ಬೀಸಿದ್ದಾರೆ.

 

 

 


ಸಂಬಂಧಿತ ಟ್ಯಾಗ್ಗಳು

petrol assault ಮ್ಯಾನೇಜರ್ ಕಾರ್ಮಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ