ಶಾಸಕ ಶ್ರೀಕಂಠಯ್ಯ ಬೆಂಬಲಿಗರ ವಿರುದ್ಧ ಕೇಸ್ ದಾಖಲು

case filed against Mla ravindra srikantaiah followers

06-08-2018

ಮಂಡ್ಯ: ಶ್ರೀರಂಗಪಟ್ಟಣದ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಯುವಕನೊಬ್ಬನ ಮೇಲೆ ಹಲ್ಲೆ ಮಾಡಿದ್ದು, ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಸಂಬಂಧ  ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ 7 ಜನ ಬೆಂಬಲಿಗರ ಮೇಲೆ ಕೇಸ್ ದಾಖಲಾಗಿದೆ.

ನಿನ್ನೆ ರಾತ್ರಿ ತಾಲ್ಲೂಕಿನ ಗೊಬ್ಬರಗಾಲದ ಯುವಕ ನಾಗೇಂದ್ರ ಎಂಬಾತನ ಮೇಲೆ ಶಾಸಕನ ಬೆಂಬಲಿಗರು ಮನಬಂದಂತೆ ಹೊಡಿದ್ದಾರೆ ಎನ್ನಲಾಗಿದ್ದು, ಇದರಿಂದ ನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದ. ಇದೀಗ ಆತ್ಮಹತ್ಯಗೆ ಪ್ರಚೋದನೆಯಡಿ ಐಪಿಸಿ ಸೆಕ್ಷನ್ 306ರ ಅಡಿ ಪ್ರಕರಣ ದಾಖಲಾಗಿದೆ.  ಬೆಂಬಲಿಗರಾದ ದಿಲೀಪ, ರವಿ, ಮಧು, ಸೇರಿದಂತೆ ಇತರೆ ನಾಲ್ವರ ಮೇಲೆ ಅರೆಕೆರೆ ಪೊಲೀಸರು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ. ‌ಘಟನೆಯಿಂದ ಗೊಬ್ಬರಗಾಲ ಗ್ರಾಮದಲ್ಲಿ ಉದ್ವಿಗ್ನ‌ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂದಂತಿದ್ದು, ಗ್ರಾಮದಲ್ಲಿ ಒಂದು ಡಿ.ಆರ್.ಎ ಪೊಲೀಸರ ತುಕುಡಿ ನಿಯೋಜನೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತ ಯುವಕನ ಶವ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.


ಸಂಬಂಧಿತ ಟ್ಯಾಗ್ಗಳು

ravindra srikantaiah srirangapatna ತುಕುಡಿ ಪರೀಕ್ಷೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ