ಸರ್ಕಾರಿ ಕಚೇರಿಯಲ್ಲಿ ಗುಂಡು-ತುಂಡು ಪಾರ್ಟಿ!

Alcohol party in a government party

06-08-2018

ದಾವಣಗೆರೆ: ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವ ಮಾತಿದೆ. ಆದರೆ, ಆ ಕೆಲಸ ನಡೆಯುವ ಜಾಗದಲ್ಲೇ ಗುಂಡು, ತುಂಡು ಪಾರ್ಟಿ ನಡೆದರೆ ಹೇಗೆ? ಹೌದು ಇಂತಹದ್ದೊಂದು ಘಟನೆ ದಾವಣಗೆರೆಯ ಕೋರ್ಟ್ ಪಕ್ಕದಲ್ಲೇ ಇರುವ ಸಹಕಾರಿ ಸಂಘಗಳ ಲೆಕ್ಕ ಪರಿಶೋಧನಾ ಉಪ ನಿರ್ದೇಶಕರ ಕಚೇರಿಯಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ರಾಜಾರೋಷವಾಗಿ ಸರ್ಕಾರಿ ಕಚೇರಿಯಲ್ಲಿಯೇ ಗುಂಡು ತುಂಡು ಪಾರ್ಟಿ ಮಾಡುತ್ತಿದ್ದದ್ದು ಮಾಧ್ಯಮಗಳ ಕಣ್ಣಿಗೆ ಬಿದ್ದಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರ ನೇತೃತ್ವದಲ್ಲೇ ಎಣ್ಣೆ ಪಾರ್ಟಿ ಮಾಡುತ್ತಿದ್ದುದು ತಿಳಿದು ಬಂದಿದೆ. ಡಿಸಿಸಿ ಬ್ಯಾಂಕ್ ಅಧಿಕಾರಿಗಳು, ಆಹಾರ ಇಲಾಖೆ ಆಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳು ಸೇರಿ ಪಾರ್ಟಿ ಕುಡಿದು ಮಜಾ ಮಾಡುತ್ತಿದ್ದ ವೇಳೆ, ಮಾಧ್ಯಮಗಳ ಕ್ಯಾಮರಾ ನೋಡುತ್ತಿದ್ದಂತೆ ದಿಕ್ಕಾಪಾಲಾಗಿ ಓಡಿದ್ದಾರೆ. ಘಟನೆ ಕುರಿತಂತೆ ಸಾರ್ವಜನಿಕರು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

government office Party ಖಾಸಗಿ ವ್ಯಕ್ತಿ ಪಾರ್ಟಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ