ಪೇಜಾವರ ಶ್ರೀಗಳ ವಿರುದ್ಧ ಕಪೋಲಕಲ್ಪಿತ ಸುದ್ದಿ: ದೂರು ದಾಖಲು

A case filed against tabloid for defamation against pejawar swamiji

04-08-2018

ಉಡುಪಿ: ಪೇಜಾವರ ಶ್ರೀಗಳ ವಿರುದ್ಧ ಊಹಾಪೋಹ ಕಲ್ಪಿತ ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಪತ್ರಿಕೆಯೊಂದರ ವಿರುದ್ಧ ದೂರು ದಾಖಲಿಸಲಾಗಿದೆ. ಸುದ್ದಿ ಪ್ರಕಟಿಸಿದ್ದ ಟ್ಯಾಬ್ಲಾಯ್ಡ್ ಪತ್ರಿಕೆ ಮತ್ತು ಅದರ ಸಂಪಾದಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

ಪೇಜಾವರ ಶ್ರೀ ಅಭಿಮಾನಿ ಬಳಗ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೇಜಾವರ ಶ್ರೀಗಳ ಮಾನಹಾನಿಯಾಗುವಂತಹ ಕಪೋಲಕಲ್ಪಿತ ವರದಿಗಳನ್ನು ಟ್ಯಾಬ್ಲಾಯ್ಡ್ ಪತ್ರಿಕೆಯೊಂದು ಪ್ರಕಟಿಸಿತ್ತು. ಶಿರೂರು ಶ್ರೀಗಳ ಸಾವಿನ ಬಳಿಕ ಹೊರಬಂದ ಸಂಚಿಕೆಯಲ್ಲಿ ಹಿರಿಯ ಯತಿ ಪೇಜಾವರ ಶ್ರೀಗಳಿಗೆ ಮಾನಹಾನಿಯಾಗುವಂಥ ವರದಿಗಳು ಈ ಟ್ಯಾಬ್ಲಾಯ್ಡ್ ನಲ್ಲಿ ಪ್ರಕಟಗೊಂಡಿದ್ದು, ಶ್ರೀಗಳ ಅನುಯಾಯಿಗಳನ್ನು ಕೆರಳಿಸಿದೆ. ಈ ಹಿನ್ನೆಲೆಯಲ್ಲಿ ವರದಿ ಪ್ರಕಟಿಸಿದ ಟ್ಯಾಬ್ಲಾಯ್ಡ್ ಪತ್ರಿಕೆ ಮತ್ತದರ ಸಂಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಭಿಮಾನಿ ಬಳಗ ಒತ್ತಾಯಿಸಿದೆ.


ಸಂಬಂಧಿತ ಟ್ಯಾಗ್ಗಳು

pejawar swamiji tabloid ಶಿರೂರು ಮಾನಹಾನಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ