ಬಾಬಾಬುಡನ್ ಗಿರಿ ರಸ್ತೆಯಲ್ಲಿ 4 ಕಡೆ ಗುಡ್ಡ ಕುಸಿತ!

bababudangiri

04-08-2018

ಚಿಕ್ಕಮಗಳೂರು: ಜಿಲ್ಲೆಯ ಬಾಬಾಬುಡನ್ ಗಿರಿ, ಮುಳ್ಳಯ್ಯನಗಿರಿ ಪ್ರದೇಶದಲ್ಲಿ ನಿರಂತರ ಮಳೆ ಹಿನ್ನೆಲೆ ದತ್ತಪೀಠ ರಸ್ತೆಯಲ್ಲಿ ಮತ್ತೆ ಗುಡ್ಡ ಕುಸಿತವಾಗಿದೆ. ನಾಲ್ಕಕ್ಕೂ ಹೆಚ್ಚು ಕಡೆ ಸವಕಳಿ ಪ್ರದೇಶದಲ್ಲಿ ರಸ್ತೆಗೆ ಉರುಳಿ ಬಿದ್ದಿದೆ ಮಣ್ಣಿನ ರಾಶಿ. ರಸ್ತೆಗೆ ಅಡ್ಡಲಾಗಿ ಕುಸಿದ ಮಣ್ಣಿನಿಂದಾಗಿ ರಸ್ತೆ ಸಂಚಾರ ದುರ್ಗಮವಾಗಿದೆ. ಕೆಲವೆಡೆ ಮಣ್ಣಿನ ರಾಶಿಯೊಂದಿಗೆ ಮರದ ಕೊಂಬೆಗಳು ಮುರಿದು ಬಿದ್ದು ಅವಾಂತರನ್ನೇ ಸೃಷ್ಟಿಸಿವೆ. ಈ ಮಾರ್ಗವಾಗಿ ಪ್ರಯಾಣಿಸುವ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುವಂತಾಗಿದೆ.


ಸಂಬಂಧಿತ ಟ್ಯಾಗ್ಗಳು

bababudan giri ghat section ಗುಡ್ಡ ಕುಸಿತ ಸವಕಳಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ