ಶಿಕ್ಷಕನೊಬ್ಬನ ಮನೆಯವರಿಂದ ಇದೆಂಥಾ ಕೃತ್ಯ!

An 2 years old child, and mother committed suicide

04-08-2018

ಮೈಸೂರು: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ತಾಯಿ ತನ್ನ ಮಗುವಿಗೆ ಬೆಂಕಿ ಹಚ್ಚಿ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮೈಸೂರಿನ ಮಹದೇವಪುರದಲ್ಲಿ ನಡೆದಿದೆ. ಗೌರಮ್ಮ (24), ಮಗು ನಿಯಾಲ್ (2) ಮೃತ ದುರ್ದೈವಿಗಳು. ಕೆ.ಆರ್.ಪೇಟೆ ಮೂಲದ ಗೌರಮ್ಮ 3 ವರ್ಷದ ಹಿಂದೆ ಮೈಸೂರು ನಿವಾಸಿ ಶಿಕ್ಷಕನಾಗಿದ್ದ  ಲೋಹಿತ್ ರನ್ನ ಮದುವೆಯಾಗಿದ್ದರು. ಮದುವೆ ಸಮಯದಲ್ಲಿ ಸಾಕಷ್ಟು ವರದಕ್ಷಿಣೆ ನೀಡಲಾಗಿತ್ತು. ಇದಾಗಿಯೂ ಮಾಲೂರಿನಲ್ಲಿ ಶಿಕ್ಷಕನಾಗಿರುವ ಪತಿ ಲೋಹಿತ್ ಮನೆಯವರಿಂದ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು. ಇದರಿಂದ ಬೇಸತ್ತ ಗೌರಮ್ಮ, ನಿನ್ನೆ ತಡರಾತ್ರಿ ಮಗು ಕೊಠಡಿಗೆ ಸೇರಿಕೊಂಡ ನಿಯಾಲ್ ಗೆ ಬೆಂಕಿ ಹಚ್ಚಿ ತಾನೂ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

dowry suicide ಕಿರುಕುಳ ಮದುವೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ