ಸಹಕಾರಿ ಬ್ಯಾಂಕ್ ಗೆ ಬೀಗ ಜಡಿದು ರೈತರ ಪ್ರತಿಭಟನೆ

Farmers protest in front of co-operative bank koppal

04-08-2018

ಕೊಪ್ಪಳ: ಸಾಲಮನ್ನಾ ಆಗಿ 8 ವರ್ಷ ಆಗಿದ್ದರೂ ಸಹ ಮರು ಸಾಲ ನೀಡದ ಬ್ಯಾಂಕ್ ವಿರುದ್ಧ ರೈತರು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕಳಮಳ್ಳಿ ಗ್ರಾಮದ ರೈತರು, ಗ್ರಾಮದ ಸಹಕಾರಿ ಬ್ಯಾಂಕ್ ಗೆ ಬೀಗ ಜಡಿದು, ಬ್ಯಾಂಕ್ ಮುಂದೆ ಮುಳ್ಳಿನ ಗಂಟುಗಳನ್ನು ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಸುಮಾರು 156 ಜನರಿಗೆ 8 ವರ್ಷದಿಂದ ಮರುಸಾಲ ನೀಡದ ಕಳಮಳ್ಳಿ ಸಹಕಾರಿ‌ ಬ್ಯಾಂಕ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಬ್ಯಾಂಕ್ ಮ್ಯಾನೇಜರ್ ಕ್ರಮ ಖಂಡಿಸಿ ಧಿಕ್ಕಾರ ಕೂಗಿದ್ದು, ಕೂಡಲೆ  ಸಾಲ ಮಂಜೂರು ಮಾಡುವಂತೆ ಒತ್ತಾಯಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Farmers co-operative bank ಮರುಸಾಲ ಧಿಕ್ಕಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ