ಶುಶ್ರೂಷಕಿಯೋ..ಕಳ್ಳಿಯೋ..!

A Nurse arrested for theft

04-08-2018

ಬೆಂಗಳೂರು: ಶುಶ್ರೂಷಕಿಯಾಗಿದ್ದ ಮನೆಯಲ್ಲಿ ಹೊಂಚು ಹಾಕಿ ಚಿನ್ನ, ಬೆಳ್ಳಿ ಆಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ ಐನಾತಿ ಮಹಿಳೆಯನ್ನು ಶ್ರೀರಾಂಪುರ ಪೊಲೀಸರು ಬಂಧಿಸಿದ್ದಾರೆ.

ಮೂಡಲಪಾಳ್ಯದ ಕವಿತಾಬಾಯ್ (26) ಬಂಧಿತ ಆರೋಪಿಯಾಗಿದ್ದು, ಬಂಧಿತಳಿಂದ 5 ಲಕ್ಷ ಮೌಲ್ಯದ 150 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಚೇತನ್ ಸಿಂಗ್ ತಿಳಿಸಿದ್ದಾರೆ.

ಶ್ರೀರಾಂಪುರದ ನಿವೃತ್ತ ಖಾಸಗಿ ಕಂಪನಿಯ ಉದ್ಯೋಗಿ ಸತ್ಯನಾರಾಯಣರಾವ್ (65) ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ನೋಡಿಕೊಳ್ಳಲು ಆರೋಪಿಯನ್ನು ಶುಶ್ರೂಷಕಿಯನ್ನಾಗಿ ನೇಮಿಸಿಕೊಳ್ಳಲಾಗಿತ್ತು. ಕೆಲ ದಿನಗಳ ಕಾಲ ಮನೆಯವರ ನಂಬಿಕೆ ಗಳಿಸಿದ್ದ ಕವಿತಾ, ಕಳೆದ ಮೇ 11ರಂದು ಸತ್ಯನಾರಾಯಣರಾವ್ ಅವರನ್ನು ಹೆಚ್‍ಸಿಜಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾಗ ಸಮಯ ಸಾಧಿಸಿ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದಳು.

ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಶ್ರೀರಾಂಪುರ ಪೊಲೀಸ್ ಇನ್ಸ್ಪೆಪೆಕ್ಟರ್ ಗೌತಮ್ ಮತ್ತವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ಪತಿ ಸುರೇಶ್ ಕೂಡ ಕಳ್ಳತನದಲ್ಲಿ ಭಾಗಿಯಾಗಿದ್ದು, ಶಿವಮೊಗ್ಗ ಮೂಲದ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Nurse Robbery ಕಾರ್ಯಾಚರಣೆ ಉದ್ಯೋಗಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ