ದೇಶದಲ್ಲಿ ದನಗಳಿಗೆ ಇರುವ ಮೌಲ್ಯ ದಲಿತರಿಗೆ ಇಲ್ಲದಂತಾಗಿದೆ !

Kannada News

30-05-2017

ಮೈಸೂರು:- ಕೇಂದ್ರ ಸರ್ಕಾರದ ನೂತನ ಕಾಯ್ದೆ ಜಾರಿಯ ಹಿಂದೆ ಸಂಚು ಅಡಗಿದೆ, ಈ ಕಾನೂನು ಜಾರಿ ಒಕ್ಕೂಟ ವ್ಯವಸ್ಥೆಯ ವಿರೋಧವಾಗಿದೆ. ಎಂದು ಮೈಸೂರಿನಲ್ಲಿ ಪ್ರಗತಿಪರ ಹೋರಾಟಗಾರ ಪ್ರೊ. ಮಹೇಶ್ ಚಂದ್ರ ಗುರು ಹೇಳಿದ್ದಾರೆ. ಮಾಂಸ ತಿನ್ನುವುದು, ಮದ್ಯ ಸೇವನೆ ಹಾಗೂ ವ್ಯಭಿಚಾರವನ್ನು ತೋರಿಸಿಕೊಟ್ಟಿದ್ದೇ ವೈದಿಕರು. ಬಹುಜನ ವಿರೋಧಿಯಾಗಿರುವ ಈ ಕಾನೂನು ಸಂವಿಧಾನದ ವಿರೋಧಿಯಾಗಿದೆ. ದೇಶದಲ್ಲಿ ದನಗಳಿಗೆ ಇರುವ ಮೌಲ್ಯ ದಲಿತರಿಗೆ ಇಲ್ಲದಂತಾಗಿದೆ. ರೈತರ ಆತ್ಮಹತ್ಯೆ, ಕಾರ್ಮಿಕರ ಅತಂತ್ರ ಪರಿಸ್ಥಿತಿ, ದಲಿತರ ಮೇಲಿನ ಹಲ್ಲೆ ತಡೆಯಲು ಸಾದ್ಯವಾಗದೆ ಈ ಕಾನೂನು ಜಾರಿ ಮಾಡಿದ್ದಾರೆ. ಇವರ ಈ ದೊಡ್ಡಣ್ಣನ ವರ್ತನೆಗೆ ಜನ ಪಾಠ ಕಲಿಸುತ್ತಾರೆ. ಮುಂದಿನ ದಿನದಲ್ಲಿ ಸಾಮಾಜಿಕ ನ್ಯಾಯದ ಪರ ಕೂಗು ಕೇಳಿಬರಲಿದೆ ಎಂದು ಅಭಿಪ್ರಾಯಪಟ್ಟರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ