ಆತನ ಒಳ ಉಡುಪಲ್ಲಿತ್ತಂತೆ 853 ಗ್ರಾಂ.ಚಿನ್ನ!

customs officers seized 853 grams of illegal gold at kempegowda airport

03-08-2018

ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ವ್ಯಕ್ತಿಯೊಬ್ಬರ ಒಳ ಉಡುಪಿನಲ್ಲಿದ್ದ 853 ಗ್ರಾಂ ಚಿನ್ನಾಭರಣಗಳ ಸಮೇತ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಈತ ಶಾರ್ಜಾದಿಂದ ವಿಮಾನದ ಮೂಲಕ ಚಿನ್ನಾಭರಣವನ್ನು ಬೆಂಗಳೂರಿಗೆ ಸಾಗುತ್ತಿದ್ದ ಎಂದು ತಿಳಿದು ಬಂದಿದೆ.

ಶಕೇನ್ ಶೇಕ್ ಎಂಬಾತ ಸಿಕ್ಕಿಬಿದ್ದ ಆರೋಪಿಯಾಗಿದ್ದಾನೆ. ಬಂಧಿತನಿಂದ 26 ಲಕ್ಷ ರೂ.ಮೌಲ್ಯದ 853 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

ಸೌದಿ ಅರೇಬಿಯಾದ ಶಾರ್ಜಾದಿಂದ ಮುಂಬೈನಲ್ಲಿ ಇಳಿದು, ಅಲ್ಲಿಂದ ಬೆಂಗಳೂರಿಗೆ ಅಕ್ರಮವಾಗಿ ಚಿನ್ನವನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕಸ್ಟಮ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದಾಗ ಒಂದರ ಮೇಲೆ ಒಂದರಂತೆ ಒಳ ಉಡುಪು ಧರಿಸಿ ಅದರಲ್ಲಿ ಚಿನ್ನದ ಪೌಡರ್ ಮತ್ತು ಪೇಸ್ಟ್ ಮಾಡಿ ಬಚ್ಚಿಟ್ಟಿರುವುದು ಪತ್ತೆಯಾಗಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.

 


ಸಂಬಂಧಿತ ಟ್ಯಾಗ್ಗಳು

customs officer Gold ಸೌದಿ ಅರೇಬಿಯಾ ದೇವನಹಳ್ಳಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ