ಎಚ್ಚರಿಕೆ...ರೀಫಂಡ್ ಮೆಸೇಜ್ ಗೆ ಮೋಸಹೋಗದಿರಿ

Be careful about refund message: cyber crime police

03-08-2018

ಬೆಂಗಳೂರು: ಆದಾಯ ತೆರಿಗೆ ರೀಫಂಡ್ ಹೆಸರಲ್ಲಿ ಮೊಬೈಲ್‍ ಗೆ ಬರುವ ಸಂದೇಶಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೈಬರ್ ಕ್ರೈಂ ವಿಭಾಗದ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಆದಾಯ ತೆರಿಗೆ ರೀಫಂಡ್ ಹೆಸರಲ್ಲಿ ಬಹುದೊಡ್ಡ ವಂಚನೆ ನಡೆಯುತ್ತಿದ್ದು ನೂ ಮೂಡ್ ಆಥ್ ಬ್ಯಾಂಕ್ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಸೈಬರ್ ಕ್ರೈಂ ಪೊಲೀಸರು ಈ ಎಚ್ಚರಿಕೆ ನೀಡಿದ್ದಾರೆ.

ಆದಾಯ ತೆರಿಗೆಯ ರೀಫಂಡ್ ಅಪ್ರೂವ್ಡೂ (Income tax refund approved) ಹೆಸರಿನ ಲಿಂಕಿನ ಮೇಸೆಜ್ ನಿಮ್ಮ ಮೊಬೈಲಿಗೆ ಬರುತ್ತದೆ. ಅಷ್ಟೇ ಅಲ್ಲದೇ ಆ ಲಿಂಕಿಗೆ ನಿಮ್ಮ ಬ್ಯಾಂಕಿನ ವಿವರಗಳನ್ನು ಹಾಕುವಂತೆ ಹೇಳುತ್ತಾರೆ. ಇದನ್ನು ನಂಬಿ ನಿಮ್ಮ ಬ್ಯಾಂಕಿನ ವಿವರಗಳನ್ನು ಹಾಕಿದರೆ ಲಿಂಕ್ ಒಪನ್ ಮಾಡುತ್ತಿದ್ದಂತೆ ನಿಮ್ಮ ಖಾತೆಯಿಂದ ದುಡ್ಡು ಕಟ್ ಆಗಿರುವ ಮೆಸೇಜ್ ಬರುತ್ತದೆ. ನಕಲಿ ಆದಾಯ ತೆರಿಗೆ ಮೆಸೇಜ್ ನಂಬಿ ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಸಾಕಷ್ಟು ಮಂದಿ ಮೋಸ ಹೋಗುತ್ತಿದ್ದಾರೆ.

ಮೋಸ ಹೋದವರು ಪೊಲೀಸರ ಮೊರೆ ಹೋಗುತ್ತಿದ್ದಾರೆ. ಈಗಾಗಲೇ ಸೈಬರ್ ಕ್ರೈಂ ಠಾಣೆಯಲ್ಲಿ ಈ ಬಗ್ಗೆ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಮನವಿ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Income tax fraud ಆದಾಯ ತೆರಿಗೆ ಸೈಬರ್ ಕ್ರೈಂ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ