ವಿವಾದಕ್ಕೆ ತೆರೆ ಎಳೆದ ‘ಒಡೆಯ’...03-08-2018

ಬೆಂಗಳೂರು: ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ಒಡೆಯರ್’ ಚಿತ್ರದ ಶೀರ್ಷಿಕೆ, ಸಿನೆಮಾ ಸೆಟ್ಟೇರುವ ಮುನ್ನವೇ ವಿವಾದಕ್ಕೆ ಕಾರಣವಾಗಿತ್ತು. ಸಿನೆಮಾ ಟೈಟಲ್ ಬದಲಾಯಿಸುವಂತೆ ಹಲವಾರು ಸಂಘಟನೆಗಳು ಪ್ರತಿಭಟನೆ ನೆಡೆಸಿ ಎಚ್ಚರಿಕೆಯನ್ನೂ ನೀಡಿದ್ದರೂ ಸಿನೆಮಾ ತಂಡಕ್ಕೆ. ಇದೀಗ ‘ಒಡೆಯರ್’ ಬದಲು ‘ಒಡೆಯ’ ಎಂದು ಸಿನೆಮಾದ ಟೈಟಲ್ ಬದಲಾಯಿಸಿದೆ ಚಿತ್ರ ತಂಡ. ಈ ಶೀರ್ಷಿಕೆಯ ಡಿ.ಬಾಸ್ ಅವರ 52ನೇ ಚಿತ್ರ ಇದೇ ತಿಂಗಳ 16 ರಂದು ಮೂಹೂರ್ತ ಸಮಾರಂಭ ನಡೆಯಲಿದೆ. ‘ಬುಲ್ ಬುಲ್’ ಮತ್ತು ‘ಪೊರ್ಕಿ’ ಚಿತ್ರಗಳ ನಂತರ ನಿರ್ದೇಶಕ ಎಂ.ಡಿ.ಶ್ರೀಧರ್ ಮತ್ತೆ ದರ್ಶನ್ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ.

 

 


ಸಂಬಂಧಿತ ಟ್ಯಾಗ್ಗಳು

challenging star D-Boss ನಿರ್ದೇಶನ ನಿರೀಕ್ಷೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ