ಜಲಾಶಯ ತುಂಬಿದ್ದರೂ ರೈತರಿಗೆ ತಪ್ಪಿಲ್ಲ ಸಂಕಷ್ಟ!

Even though the reservoir is full farmers are still worried!

03-08-2018

ಕೊಪ್ಪಳ: ತಾಲ್ಲೂಕಿನ ಹಿರೇಹಳ್ಳ ಜಲಾಶಯ ತುಂಬಿದ್ದರೂ ಈ ಭಾಗದ ರೈತರಿಗೆ ಸಂಕಷ್ಟ ತಪ್ಪಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೆಳೆಗಳಿಗೆ ನೀರಿಲ್ಲದೆ ರೈತರು ಆತಂಕಗೊಂಡಿದ್ದಾರೆ. ಬಹಳ ವರ್ಷಗಳ ನಂತರ ಜಲಾಶಯ ಭರ್ತಿಯಾಗಿದ್ದರೂ ರೈತರ ಬವಣೆ ಮಾತ್ರ ನಿಂತಿಲ್ಲ. ಕಾರಣವೇನೆಂದರೆ ಅಧಿಕಾರಿಗಳ ನಿರ್ಲಕ್ಷ್ಯ. ಇದರಿಂದ ಜಲಾಶಯ ತುಂಬಿದ್ದರೂ ರೈತರ ಜಮೀನುಗಳಿಗೆ ತಲುಪುತ್ತಿಲ್ಲ ಜಲಾಶಯದ ನೀರು.

ಜಲಾಶಯದಿಂದ ನೀರನ್ನು ಎಡ ಹಾಗೂ ಬಲದಂಡೆ ನಾಲೆಗಳ ಮೂಲಕ ಹರಿಯ ಬಿಡಲಾಗಿದ್ದು, ಕಾಲುವೆ ದುರಸ್ತಿಯಿಂದ ರೈತರ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಕಾಲುವೆಯಲ್ಲಿ ಬೆಳೆದಿರೋ ಹುಲ್ಲು ಹಾಗೂ ತುಂಬಿಕೊಂಡಿರುವ ಹೂಳಿನಿಂದ ತೊಂದರೆ ಅನುಭವಿಸುತ್ತಿರುವವರು ಮಾತ್ರ ರೈತರು. ವರ್ಷದಿಂದ ವರ್ಷಕ್ಕೆ ಕಾಲುವೆ ನಿರ್ವಹಣೆಗೆ ಅನುದಾನ ಬರುತ್ತಿದ್ದರೂ ಜಲಾಶಯ ಮಾತ್ರ ಹಾಗೆಯೇ ಇದೆ. ಹೂಳೆತ್ತಿಲ್ಲ, ಕಳೆಯನ್ನೂ ಸಹ ತೆಗೆದಿಲ್ಲ. ಹಣವನ್ನೆಲ್ಲಾ ಅಧಿಕಾರಿಗಳು ಗುಳುಂ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಜಲಾಶಯ ನಿರ್ಮಾಣವಾಗಿ 15 ವರ್ಷವಾದರೂ ಕಾಲುವೆ ದುರಸ್ತಿ ಮಾಡದಿರುವುದು ಕಂಡುಬಂದಿದೆ. ಈ ಕುರಿತು ಅಧಿಕಾರಿ ಬಸವರಾಜ್ ಬಂಡಿವಡ್ಡರ ವಿರುದ್ಧ ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾದನೂರು, ಯತ್ನಟ್ಟಿ, ಕಿನ್ನಾಳ ಸೇರಿದಂತೆ ಹತ್ತಾರು ಹಳ್ಳಿಗಳ ರೈತರು ಇದರಿಂದ ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಆದರೆ, ಅಧಿಕಾರಗಳು ಮಾತ್ರ ಇತ್ತ ತಲೆ ಹಾಕಿಲ್ಲ.


ಸಂಬಂಧಿತ ಟ್ಯಾಗ್ಗಳು

Reservoir Rarmers ನಿರ್ಲಕ್ಷ್ಯ ಜಲಾಶಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ