ಮಕ್ಕಳಿಗೆ ಪಾಠ ಹೇಳಿಕೊಟ್ಟ ಶಾಸಕ ಲಿಂಗೇಶ್

Beluru MLA K.S Lingesha sudden visited to school!

03-08-2018

ಹಾಸನ: ಬೇಲೂರು ಶಾಸಕ ಕೆ.ಎಸ್.ಲಿಂಗೇಶ್ ಅವರು ತಾಲ್ಲೂಕಿನ ವಸತಿ ಶಾಲೆಗೆ ದಿಢೀರ್ ಭೇಟಿಕೊಟ್ಟಿದ್ದಾರೆ. ಈ ವೇಳೆ ವಸತಿ ಶಾಲೆಯ ಸಂಪೂರ್ಣ ವ್ಯವಸ್ಥೆಗಳನ್ನ ಪರಿಶೀಲಿಸಿದ್ದಾರೆ. ಬೇಲೂರಿನ ಹಗರೆಯಲ್ಲಿರುವ ಇಂದಿರಾ ಗಾಂಧಿ ವಸತಿ ಶಾಲೆಗೆ ಶಾಸಕರು ಭೇಟಿ ಕೊಟ್ಟಿದ್ದು, ಮಕ್ಕಳೊಂದಿಗೆ ಬೆರತು ಸಮಸ್ಯೆಗಳನ್ನು ಆಲಿಸಿದ್ದಾರೆ. ಇದೇ ವೇಳೆ ಮಕ್ಕಳಿಗೆ ಪಾಠ ಮಾಡುವ ಮೂಲಕ ಕೆಲ ಸಮಯ ಮೇಷ್ಟ್ರಾಗಿದ್ದ ಶಾಸಕ ಕೆ.ಎಸ್.ಲಿಂಗೇಶ್, ಮಕ್ಕಳೊಂದಿಗೆ ಕುಳಿತು ರಾಗಿಮುದ್ದೆ ಊಟ ಸವಿದರು.

ನಂತರದಲ್ಲಿ ಮಾತನಾಡಿದ ಶಾಸಕರು, ಶಿಕ್ಷಣ ವ್ಯವಸ್ಥೆ ಉಳ್ಳವರ ವಸ್ತುವಾಗಿ ವ್ಯಾಪಾರವಾಗಬಾರದು, ಹಣವಿದ್ದವರಿಗೆ ಒಂದು ರೀತಿಯ ಶಿಕ್ಷಣ, ಇಲ್ಲದವರಿಗೆ ಒಂದು ಶಿಕ್ಷಣವಾಗಬಾರದು. ಹಳ್ಳಿಯ ಮಕ್ಕಳಿಗೂ ಕೂಡಾ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕು. ಅಂತಹ ಕಾರ್ಯ ಮಾಡುವುದರಲ್ಲಿ ನಾವು ಸದಾ ಮುಂದಿರುತ್ತೇವೆ.ಉಜ್ವಲ ಶಿಕ್ಷಣ ಭವಿಷ್ಯವನ್ನ ಭದ್ರಗೊಳಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಮಕ್ಕಳಿಗೆ ಪಾಠ ಮಾಡಿದ ಬಳಿದ ಶಿಕ್ಷಕರುಗಳಿಗೆ ಕಿವಿ ಮಾತು ಹೇಳಿದ್ದಾರೆ ಶಾಸಕ ಲಿಂಗೇಶ್.


ಸಂಬಂಧಿತ ಟ್ಯಾಗ್ಗಳು

MLa Beluru ವ್ಯಾಪಾರ ಭವಿಷ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ