ಕುಡುಕ ಗಂಡನ ಕಾಟ: ಮಕ್ಕಳೊಂದಿಗೆ ನದಿಗೆ ಹಾರಿದ ಮಹಿಳೆ!

A women attempted to suicide with their children in river

03-08-2018

ಮೈಸೂರು: ಕುಡುಕ‌ ಗಂಡನ ಚಿತ್ರಹಿಂಸೆ ತಾಳಲಾರದೆ ಆತ್ಮಹತ್ಯೆಗೆ ನಿರ್ಧರಿಸಿದ್ದ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳ ಸಮೇತ ನದಿಗೆ ಹಾರಿ ಸಾಯಲು ಯತ್ನಿಸಿದ್ದಾರೆ. ಆದರೆ ಅದೃಷ್ಟವಶಾತ್ ಮೂವರೂ ಬದುಕುಳಿದಿದ್ದಾರೆ. ಘಟನೆ ಮೈಸೂರಿನ ನಂಜನಗೂಡು ಸಮೀಪದ ಕಪಿಲಾ ನದಿ ಬಳಿ ನಡೆದಿದೆ.

ಕುಡುಕ‌ ಗಂಡನ ಚಿತ್ರಹಿಂಸೆ ತಾಳಲಾರದೆ ಬೇಸತ್ತಿದ್ದ ಮೈಸೂರಿನ‌ ಸುಣ್ಣದಕೇರಿ‌ ನಿವಾಸಿ ಜಯ ಎಂಬಾಕೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದು. ಇದಕ್ಕಾಗಿ ತನ್ನ ಮಕ್ಕಳೊಂದಿಗೆ ಕಪಿಲಾ ನದಿಗೆ ಹಾರಿದ್ದರು. ಇದೇ ವೇಳೆ ಸ್ಥಳದಲ್ಲಿದ್ದ ಶ್ರೀಕಂಠೇಶ್ವರ ದೇವಾಲಯದ ಸಿಬ್ಬಂದಿ ತಕ್ಷಣ ನದಿಗೆ ಧುಮುಕಿ ಮೂವರನ್ನು ರಕ್ಷಿಸಿದ್ದಾರೆ.

ಗಂಡ ಶಿವಕುಮಾರ್ ಕುಡಿತಕ್ಕೆ ದಾಸನಾಗಿದ್ದು, ಕುಟುಂಬ ನಿರ್ವಹಣೆ ಕಷ್ಟವಾದ ಹಿನ್ನೆಲೆ ಜೀವನ ನಡೆಸುವುದು ದುಸ್ಥರವಾಗಿತ್ತು. ಆದ್ದರಿಂದ ಇಬ್ಬರು ಹೆಣ್ಣು ಮಕ್ಕಳ ಸಮೇತ ಪ್ರಾಣ ಬಿಡಲು ಈ ರೀತಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ನಂಜನಗೂಡು ಪೊಲೀಸರ ರಕ್ಷಣೆಯಲ್ಲಿದ್ದಾರೆ ತಾಯಿ, ಮಕ್ಕಳು. ಗಂಡ ಶಿವಕುಮಾರ್ ನನ್ನು ಕರೆಸಿಕೊಂಡ ಪೊಲೀಸರು ಬುದ್ಧಿವಾದ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

suicidal Kapila River ಶ್ರೀಕಂಠೇಶ್ವರ ಕುಡಿತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ