ಕೊನೆಗೂ ಸಿಕ್ಕಿಬಿದ್ದಿದ್ದಾನೆ ಕಾಮಾಂಧ!

Attempt to rape and Murder: accused arrested by police

03-08-2018

ಬೆಂಗಳೂರು: ಮಾಲೂರಿನ ಬಿಜಿಎಸ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ ರಕ್ಷಿತಾ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದ ಕಾಮಾಂಧನು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕಳೆದ ಬುಧವಾರ ಸಂಜೆ ಶಾಲಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ ನಡೆಸಿ ಕೊಲೆ ಮಾಡಿದ್ದನು. ಬಂಧಿತ ಆರೋಪಿ ಮೃತ ವಿದ್ಯಾರ್ಥಿನಿ ಮನೆ ಪಕ್ಕದಲ್ಲಿ ನಡೆಯುತ್ತಿದ್ದ ಕಟ್ಟಡ ನಿರ್ಮಾಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಇಂದಿರಾನಗರ ನಿವಾಸದ ಬಳಿ ಕೂಲಿ ಕೆಲಸಕ್ಕೆಂದು ಟೇಕಲ್ ನಿಂದ ಪ್ರತಿನಿತ್ಯ ಬರುತ್ತಿದ್ದನು ಎನ್ನಲಾಗಿದೆ. ಮಾಲೂರು ಪೊಲೀಸರ ಯಶಸ್ವಿ ಕಾರ್ಯಾಚರಣೆಯಿಂದ ಆರೋಪಿ ಬಂಧವಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ