ವಿವಿಗಳಲ್ಲಿ ಕೌಶಲಾಧಾರಿತ ಶಿಕ್ಷಣ: ಜಿ.ಟಿ.ದೇವೇಗೌಡ

Skill education in universities: GT Devegowda

03-08-2018

ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು, ವಿಶ್ವವಿದ್ಯಾಲಯಗಳ ಉಪಕುಲಪತಿಗಳು, ಕುಲಸಚಿವರು ಮತ್ತು ಹಣಕಾಸು ಅಧಿಕಾರಿಗಳೊಂದಿಗೆ ನಿನ್ನೆ ವಿಧಾನಸೌಧದಲ್ಲಿ ಪ್ರಥಮ ಸಭೆ ನಡೆಸಿದ್ದಾರೆ. ಸಭೆ ಬಳಿಕ ಮಾತನಾಡಿದ ಸಚಿವರು, ಎಲ್ಲಾ ವಿವಿಗಳ ಸಂಪೂರ್ಣ ಮಾಹಿತಿ ಪಡೆದಿದ್ದೇವೆ. ಉನ್ನತ ಶಿಕ್ಷಣದಲ್ಲಿ ಕೌಶಲ್ಯಾಧಾರಿತ ಶಿಕ್ಷಣ ಕೊಡಲು ಕಾರ್ಯಕ್ರಮ ರೂಪಿಸಲು ಸಲಹೆ ಪಡೆದಿದ್ದೇನೆ ಎಂದು ತಿಳಿಸಿದರು.

ಉನ್ನತ ಶಿಕ್ಷಣ ಸಮಾಜದ ಕಲ್ಯಾಣಕ್ಕಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಮಕ್ಕಳಿಗೂ ಉನ್ನತ ಶಿಕ್ಷಣ ಕೊಡಿಸಲು ಯೋಜನೆ, ಕಾಲೇಜುಗಳಲ್ಲಿನ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದು ಹೇಳಿದರು. ನಬಾರ್ಡ್ ನಿಂದ 4 ಸಾವಿರ ಕೋಟಿ ಕೇಳಿದ್ದೇವೆ, ವಿಶ್ವ ಬ್ಯಾಂಕ್ ನಿಂದ 300 ಕೋಟಿ ಕೇಳಿದ್ದೇವೆ, 160 ಕೋಟಿ ನಮಗೆ ಸಿಗುತ್ತೆ. ಬಜೆಟ್ ನಲ್ಲಿ 150 ಕೋಟಿ ಮೀಸಲಿಟ್ಟಿದ್ದಾರೆ. ಹೀಗಾಗಿ 750 ಕೋಟಿ ವರೆಗೂ ಹಣ ಖರ್ಚು ಮಾಡಬಹುದು. ಹೀಗಾಗಿ ಖಾಲಿ ಇರುವ 5 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರು ವಿವರಿಸಿದರು.

ಕೇಂದ್ರಿಯ ವಿವಿ ಸಂವಹನ ವಿಭಾಗ ಬಂದ್, ಹಾಗೂ ಕೆ.ಎಸ್.ಒ.ಯು ಕುರಿತು ಯಾವುದೇ ಪ್ರತಿಕ್ರಿಯೆ ನೀಡದ ಜಿಟಿಡಿ, ಮಾಧ್ಯಮಗಳ ಯಾವುದೇ ಪ್ರಶ್ನೆಗೂ ಉತ್ತರ ನೀಡಲಿಲ್ಲ. ಶಿಕ್ಷಕರ ನೇಮಕದಿಂದ ಹಿಡಿದು ಹಾಲಿ ಶಿಕ್ಷಕರಿಗೂ ಟ್ರೈನಿಂಗ್ ನೀಡಲಾಗುವುದು. ಅನುದಾನದ ಬಿಡುಗಡೆ ಕುರಿತು ಪ್ರತಿ ವಿವಿಗಳಿಂದ ಮಾಹಿತಿ ಕೇಳಲಾಗಿದೆ. ಹೊಸ ಕೊರ್ಸ್ ಗಳ ಬಗ್ಗೆ ಗಮನ ಹರಿಸಲಾಗುವುದು. ಹಳ್ಳಿಗಳ ಅಭಿವೃದ್ಧಿ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುವುದು. ಪ್ರತಿ ವಿವಿಗಳು 5 ಹಳ್ಳಿಗಳನ್ನು ದತ್ತು ತೆಗೆದುಕೊಂಡು ಅವುಗಳ ಅಭಿವೃದ್ಧಿಗೆ ಗಮನ‌ ಹರಿಸಲಾಗುವುದು ಎಂದು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ