ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ: ಐವರ ಬಂಧನ

prostitution in a lodge: police arrested 5 people

02-08-2018

ಬಳ್ಳಾರಿ: ಜಿಲ್ಲೆಯ ಬಳ್ಳಾರಿ-ಬೆಂಗಳೂರು ರಸ್ತೆಯಲ್ಲಿನ ಲಾಡ್ಜ್ ಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ, ಭರಣಿ ಮತ್ತು ಶ್ರೀದುರ್ಗಾ ಲಾಡ್ಜ್ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಲಾಡ್ಜ್ ಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದು ಕಂಡು ಬಂದಿದ್ದು, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆಯರನ್ನು ರಕ್ಷಸಿಸಲಾಗಿದೆ. ಎಸ್.ಪಿ.ಅರುಣ್ ರಂಗರಾಜನ್ ನೇತೃತ್ವದಲ್ಲಿ ದಾಳಿ ಮಾಡಿದ್ದು, ಲಾಡ್ಜ್ ಮಾಲೀಕರು ಸೇರಿದಂತೆ ದಂಧೆಯಲ್ಲಿ ತೋಡಗಿದ್ದ ಐವರನ್ನು ಬಂಧಿಸಿದ್ದಾರೆ. ದಂಧೆ ಬಗ್ಗೆ ಮಾಹಿತಿ ಇಲ್ಲದ ಪೊಲೀಸರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ ಎಸ್.ಪಿ.ಅರುಣ್. ಈ ದಂಧೆಯಲ್ಲಿ ಹಲವರು ಶಾಮೀಲಾಗಿರುವ ಶಂಕೆ ಮೇರೆಗೆ ತನಿಖೆಗೆ ಆದೇಶಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

prostitution lodge ಅನೈತಿಕ ತರಾಟೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ