ಹಾಡಹಗಲೆ ಚಿತ್ರ ನಟರೊಬ್ಬರ ಮೇಲೆ ಹಲ್ಲೆಗೆ ಯತ್ನ !

30-05-2017 293
ರಾಮನಗರ:- ಹಾಡಹಗಲೆ ಚಿತ್ರ ನಟರೊಬ್ಬರ ಮೇಲೆ ಹಲ್ಲೆ ನಡೆದ ಘಟನೆ ರಾಮನಗರದ ಬಳಿ ನಡೆದಿದೆ. ರಾಮನಗರದ ಬೆಂಗಳೂರು-ಮೈಸೂರು ಹೆದ್ದಾರಿಯ ಮುಖ್ಯ ರಸ್ತೆಯಲ್ಲಿ ಚಿತ್ರ ನಟನ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ಯುಗಪುರಷ ಚಿತ್ರದ ನಾಯಕ ಅರ್ಜನ್ ದೇವ್ ಕಾರಿನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ರಾಮನಗರ ಜಿಲ್ಲಾಕೋರ್ಟ್ ಆವರಣದ ಮುಂದೆ ಇರುವ ಎಸ್.ಬಿ.ಎಂ ಬ್ಯಾಂಕ್ ಎದುರು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳಿಂದ ಏಕಾಏಕಿ ನಟನ ಕಾರಿನ ಗಾಜು ಪುಡಿಪುಡಿ ಮಾಡಿ ಹಾಡಹಗಲೇ ಹಲ್ಲೆಗೆ ಯತ್ನಿಸಿದ್ದಾರೆ. ಐಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಒಂದು ಕಮೆಂಟನ್ನು ಹಾಕಿ