ಕೊಕೇನ್, ನೈಜೀರಿಯನ್ ಪ್ರಜೆ, 75 ಸಾವಿರ ಮಾಲು ವಶ!

cocaine selling, nigerian citizen arrested by police

02-08-2018

ಬೆಂಗಳೂರು: ಕೊಕೇನ್ ಮಾರಾಟ ಮಾಡುತ್ತಿದ್ದ ನೈಜೀರಿಯನ್ ಪ್ರಜೆಯೊಬ್ಬನನ್ನು ಬಂಧಿಸಿರುವ ಸಿಸಿಬಿ ಪೊಲೀಸರು 75 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನೈಜೀರಿಯಾದ ಆಬಿಯಾದ ಜೆರಿ ಆಗಾ (29)ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 5 ಗ್ರಾಂ ಕೊಕೇನ್, ಒಂದು ಮೊಬೈಲ್, ಒಂದು ದ್ವಿ-ಚಕ್ರ ವಾಹನ ಹಾಗೂ ನಗದು ಸೇರಿ 75 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಭಾರತಿ ನಗರದ ಫ್ರೋಮ್ ನೇಡ್ ರಸ್ತೆಯಲ್ಲಿ ಕೊಕೇನ್ ಮಾರಾಟ ಮಾಡಲು ಆರೋಪಿಯು ಯತ್ನ ನಡೆಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಪೊಲೀಸರು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಆರೋಪಿಯು ಹವ್ಯಾಸಿ ಮಾದಕ ವಸ್ತು ದಂಧೆ ಕೋರನಾಗಿದ್ದು, 2017ರಲ್ಲಿ ಮಹದೇವಪುರದಲ್ಲಿ ಕೊಕೇನ್ ಮಾದಕ ವಸ್ತುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಮಯದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದನು. ನಂತರವೂ ಇದೇ ದಂಧೆ ಮುಂದುವರೆಸಿಕೊಂಡು ಬಂದಿರುವುದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಯ ವಿರುದ್ಧ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಸಂಬಂಧಿತ ಟ್ಯಾಗ್ಗಳು

cocaine nigerian ಜೈಲು ಮಾರಾಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ