ನಮ್ಮೆಲ್ಲರದ್ದೂ ಒಂದೇ ನೆಲ-ಭಾಷೆ ಎಲ್ಲರೂ ಕನ್ನಡಿಗರೇ: ಡಿಸಿಎಂ

DCM parameshwar reaction on uttar karnataka bandh

02-08-2018

ಬೆಂಗಳೂರು: ನಮ್ಮ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿದ್ದು, ಬಿಜೆಪಿ ರಾಜಕೀಯ ಮಾಡಲೆಂದೇ ರಾಜ್ಯ ಒಡೆಯುವ ಮಾತನ್ನಾಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮದು ಅಖಂಡ ಕರ್ನಾಟಕ. ರಾಜ್ಯವನ್ನು ಒಡೆಯುವ ಮಾತನ್ನು ಯಾರೂ ಆಡಬಾರದು. ಬಿಜೆಪಿಯವರು ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಬಂದ ಎಲ್ಲ‌ ಸರ್ಕಾರಗಳು ಉತ್ತರ ಕರ್ನಾಟಕಕ್ಕೆ ಅವರದ್ದೇ ಆದ ಕೊಡುಗೆ ನೀಡಿವೆ. ನಮ್ಮ ಸರ್ಕಾರ ಆ ಭಾಗದವರಿಗೆ ವ್ಯತಿರಿಕ್ತವಾಗಿ ಯಾವ ಕೆಲಸವನ್ನು ಮಾಡುವುದಿಲ್ಲ. ಎಸ್‌.ಎಂ.ಕೃಷ್ಞ ಅವರ ಕಾಲದಲ್ಲಿ ಹಿಂದುಳಿದ ತಾಲ್ಲೂಕುಗಳಿಗೆ ಬಿಡುಗಡೆ ಮಾಡಿದ ಅನುದಾನದಿಂದ ಸಾಕಷ್ಟು ಕೆಲಸವಾಗಿದೆ. ಈ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರವೂ ಮುಂದುವರೆಸಿಕೊಂಡು ಹೋಗುತ್ತಿವೆ. ನಮ್ಮೆಲ್ಲರದ್ದೂ ಒಂದೇ ಭಾಷೆ, ನೆಲ. ಎಲ್ಲರೂ ಕನ್ನಡಿಗರೇ ಎಂದು ಹೇಳಿದರು.

ಅಕ್ರಮ ವಲಸಿಗರ ಬಗ್ಗೆ ಈಗಾಗಲೇ ಮಾಹಿತಿ ಬಂದಿದ್ದು, ಪೊಲೀಸರು ಇಂಥವರನ್ನು ಹುಡುಕುವ ಕೆಲಸದಲ್ಲಿದ್ದಾರೆ. ಆಫ್ರಿಕಾ ದೇಶದ 107 ವಿದ್ಯಾರ್ಥಿಗಳ ವೀಸಾ ಅವಧಿ ಮುಗಿದಿದ್ದರೂ ಇಲ್ಲೇ ಇರುವುದು ಗಮನಕ್ಕೆ ಬಂದಿದ್ದು, ವಾಪಾಸ್ ಕಳುಹಿಸುವ ಕೆಲಸ ಮಾಡಲಾಗಿದೆ‌. ಈ ರೀತಿ ಅಧಿಕೃತ ಕಾಗದಪತ್ರ ಇಲ್ಲದಿರುವವರನ್ನು ವಾಪಸ್ ಕಳುಹಿಸಲಾಗುವುದು ಎಂದರು.

 


ಸಂಬಂಧಿತ ಟ್ಯಾಗ್ಗಳು

G. Parameshwara development ಎಸ್‌.ಎಂ.ಕೃಷ್ಞ ಮಾಧ್ಯಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ