ಹಾವೇರಿಯಲ್ಲಿ ಬಂದ್ ಸಂಪೂರ್ಣ ವಿಫಲ!

No bandh in haveri!

02-08-2018

ಹಾವೇರಿ: ಉತ್ತರ ಕರ್ನಾಟಕ ಪ್ರತ್ಯೇಕಗೆ ಆಗ್ರಹಿಸಿ ಬಂದ್ ಗೆ ಕರೆ ನೀಡಿದ್ದರೂ ಹಾವೇರಿಯಲ್ಲಿ ಬಂದ್ ಸಂಪೂರ್ಣ ವಿಫಲ ಆಗಿದೆ. ಜಿಲ್ಲೆಯಲ್ಲಿ ಎಂದಿನಂತೆ ಜನಜೀವನ ಹಾಗೂ ಸಾರಿಗೆ ಸಂಚಾರ, ವ್ಯಾಪಾರ ವಹಿವಾಟು, ಹೊಟೇಲ್,  ಶಾಲಾ-ಕಾಲೇಜುಗಳು ಎಲ್ಲವೂ ಎಂದಿನಂತೆ  ಮುಂದುವರೆದಿದ್ದವು. ಕೇವಲ ಉತ್ತರ ಕರ್ನಾಟಕ ರೈತ ಹೋರಾಟ ಸಮಿತಿ ಮಾತ್ರ ಬಂದ್ ಗೆ ಮನವಿ ಸಲ್ಲಿಸಿತ್ತು, ಬಂದ್ ಬೆಂಬಲಿಸಿ ಕೇವಲ ಬೆರಳೆಣಿಕೆಯಷ್ಟು ರೈತರು ಆಗಮಿಸಿದ್ದು, ಪುರಸಿದ್ದೇಶ್ವರ ದೇವಸ್ಥಾನದಿಂದ ಸಿದ್ದಪ್ಪ ಸರ್ಕಲ್ ವರಗೆ ನಡೆಯಬೇಕಾಗಿದ್ದ ಪ್ರತಿಭಟನಾ ಮೆರವಣಿಗೆಯನ್ನು, ನೀರಿಕ್ಷೆ ಮಟ್ಟದಲ್ಲಿ ರೈತರು ಪ್ರತಿಭಟನೆಗೆ ಬಾರದ ಹಿನ್ನೆಲೆ, ಪ್ರತಿಭಟನಾ ಮೆರವಣಿಗೆ ಕೈಬಿಡಲಾಗಿದೆ ಎಂದು ತಿಳಿದು ಬಂದಿದೆ.


ಸಂಬಂಧಿತ ಟ್ಯಾಗ್ಗಳು

Haveri farmers protest ಸರ್ಕಲ್ ವಿಫಲ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ