ರಾಯಚೂರಲ್ಲೂ ಉ.ಕ.ಪ್ರತ್ಯೇಕತೆ ವಿರುದ್ಧ ಹೋರಾಟ

Protest against bandh at raichur

02-08-2018

ರಾಯಚೂರು: 371(ಜೆ) ಕಲಂ ಸಮರ್ಪಕ ಜಾರಿಗೆ ಒತ್ತಾಯಿಸಿ ರಾಯಚೂರಿನಲ್ಲಿ ಹೈದರಾಬಾದ್ ಕರ್ನಾಟಕ ಪ್ರಗತಿಪರ ಸಂಘಟನೆಗಳ ಒಕ್ಕೂಟ ಧರಣಿ ನಡೆಸಿದೆ. ರಾಯಚೂರಿನ ತಹಶೀಲ್ದಾರ ಕಚೇರಿ ಬಳಿ ನೂರಾರು ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಿ, ಪ್ರತ್ಯೇಕ ರಾಜ್ಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರಾಜ್ಯದ ಎರಡನೇ ರಾಜಧಾನಿ ಬೆಳಗಾವಿಯನ್ನು ಮಾಡಲು ಕೂಡ ವಿರೋಧಿಸಿದ್ದಾರೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಎರಡನೇ ರಾಜಧಾನಿ ಮಾಡಲು ಒತ್ತಾಯಿಸಿದ್ದಾರೆ. ಅಖಂಡ ಕರ್ನಾಟಕದ ಪರ ಘೋಷಣೆ ಕೂಗುತ್ತಿರುವ ಹೋರಾಟಗಾರರು, ಪ್ಯತ್ಯೇಕತೆಯನ್ನು ವಿರೋಧಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಎಂಎಲ್ಸಿ ಎನ್.ಎಸ್.ಭೋಸರಾಜು ಅವರು ಭೇಟಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Hyderabad capital city ಕಾರ್ಯಕರ್ತ ರಾಜಧಾನಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ