ಸೊಸೈಟಿ ಸಿಇಒ ನಿಗೂಢ ನಾಪತ್ತೆ !

Kannada News

30-05-2017

ಮಂಡ್ಯ:- ಸೊಸೈಟಿ ಸಿಇಒ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆಯೊಂದು ಮಂಡ್ಯದಲ್ಲಿ ನಡೆದಿದೆ. ದೊಡ್ಡರಸಿನಕೆರೆ ಸೊಸೈಟಿ ಸಿಇಒ ಶೋಭಾ ನಾಪತ್ತೆಯಾದವರು. ಶೋಭ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ದೊಡ್ಡರಸಿನಕೆರೆ ಗ್ರಾಮ ನಿವಾಸಿಯಾಗಿದ್ದರು. ನಿನ್ನೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಬಂದಿದ್ದ ಶೋಭಾ, ಮಧ್ಯಾಹ್ನದ ವೇಳೆಗೆ ಕರೆ ಮಾಡಿದಾಗ ಎರಡು ಮೊಬೈಲ್ ಸ್ವಿಚ್ ಆಫ್ ಆಗಿವೆ, ಇದರಿಂದ ಆತಂಕಗೊಂಡ ಶೋಭಾ ಕುಟುಂಬಸ್ಥರು, ಪತಿ ಮಹದೇವ ಅವರಿಂದ  ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ