ಒಳ್ಳಾರಿಯಲ್ಲಿ ಬಂದ್ ಇಲ್ಲ: ಎಂದಿನಂತೆ ಜನಜೀವನ

No bandh in bellary

02-08-2018

ಬಳ್ಳಾರಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಇಂದು ವಿವಿಧ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದಾರೆ. ಆದರೆ, ಬಳ್ಳಾರಿಯಲ್ಲಿ ಯಾವುದೇ ಬಂದ್ ಇಲ್ಲ. ಬೆಳಿಗ್ಗೆಯಿಂದಲೇ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಮಾಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿದೆ. ರಾಜ್ಯ ವಿಂಗಡಣೆ ಬೇಡ ಎಂದು, ಉತ್ತರ ಕರ್ನಾಟಕ ಅಭಿವೃದ್ದಿಗೆ ಒತ್ತಾಯಿಸಿ ಧರಣಿ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿರುವ ನೂರಾರು ಕಾರ್ಯಕರ್ತರು ಅಖಂಡ ಕರ್ನಾಟಕ ಒಡೆಯುವುದು ಬೇಡ ಎಂದು ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಜನಜೀವನ ಎಂದಿನಂತೆ ಇದೆ. ಸರ್ಕಾರಿ ಬಸ್, ಶಾಲಾ-ಕಾಲೇಜು, ಆಟೋ, ಹೋಟೆಲ್ ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಒಟ್ಟಾರೆ ಒಳ್ಳಾರಿಯಲ್ಲಿ ಬಂದ್ ಗೆ ಯಾವುದೇ ಬೆಂಬಲ ಇಲ್ಲದಂತಾಗಿದೆ.


ಸಂಬಂಧಿತ ಟ್ಯಾಗ್ಗಳು

Bandh uttar karnataka ಜನಜೀವನ ಅಖಂಡ ಕರ್ನಾಟಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ