ಪೊಲೀಸ್ ಜೀಪ್ ಅಪಘಾತ: ಮೂವರು ಆಸ್ಪತ್ರೆಗೆ ದಾಖಲು

Police Jeep Accident: inspector and other 2 injured

02-08-2018

ಯಾದಗಿರಿ: ದಾರಿಗೆ ಅಡ್ಡಬಂದ ದನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಪೊಲೀಸ್ ಜೀಪ್ ಅಪಘಾತವಾಗಿದೆ. ಜಿಲ್ಲೆಯ ಶಹಾಪುರ ತಾಲ್ಲೂಕಿನ ಖಾನಾಪುರದ ಬಳಿ ಘಟನೆ ನಡೆದಿದೆ. ಯಾದಗಿರಿಯಿಂದ ಕಲಬುರಗಿಗೆ ಪೊಲೀಸ್ ಸಿಬ್ಬಂದಿ ಹೊರಟಿದ್ದರು, ಈ ವೇಳೆ ಅಪಘಾತವಾಗಿದೆ. ಘಟನೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಸೇರಿ ಮೂವರಿಗೆ ಗಾಯಗಳಾಗಿವೆ. ಕಲಬುರಗಿ ಪೊಲೀಸ್ ಇನ್ಸ್ಪೆಕ್ಟರ್ ಪಂಚಾಕ್ಷರಯ್ಯ, ಪೇದೆಗಳಾದ ಪ್ರಶಾಂತ್ ಮತ್ತು ಶ್ರೀಶೈಲ ಎಂಬುವರಿಗೆ ಗಾಯಗಳಾಗಿವೆ. ಈ ಮೂವರನ್ನು ಶಹಾಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಾದಗಿರಿಯಿಂದ ಕಲಬುರಗಿಗೆ ಬರುವಾಗ ಮಾರ್ಗ ಮಧ್ಯೆ ದಿಢೀರ್ ಅಡ್ಡ ಬಂದ ಜಾನುವಾರನ್ನು ರಕ್ಷಿಸಲು ಹೋಗಿ ರಸ್ತೆ ಪಕ್ಕದ ಕಟ್ಟಡಕ್ಕೆ ಪೊಲೀಸ್ ವಾಹನ ಡಿಕ್ಕಿ ಹೊಡೆದಿದೆ. ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಸಂಬಂಧಿತ ಟ್ಯಾಗ್ಗಳು

Police Jeep Accident ದಿಢೀರ್ ಜಾನುವಾರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ