'ರಾಜ್ಯದ 6 ಜಿಲ್ಲೆಗಳಲ್ಲಿ ಅಭಿವೃದ್ಧಿ ಚುರುಕಾಗಬೇಕಾಗಿದೆ’

MP Muddahanumegowda spoke about 371(j) at lok sabha

01-08-2018

ಬೆಂಗಳೂರು: ಅಭಿವೃದ್ಧಿಯಲ್ಲಿ ತೀರ ಹಿಂದುಳಿದಿರುವ ಹೈದರಾಬಾದ್-ಕರ್ನಾಟಕ ವಲಯದ ಪ್ರಗತಿಗಾಗಿ 371(ಜೆ) ಅನ್ವಯ ವಿಶೇಷ ಸ್ಥಾನಮಾನ ನೀಡಿದ್ದರೂ ಸಹ ಸಂಬಂಧಪಟ್ಟ 6 ಜಿಲ್ಲೆಗಳಲ್ಲಿ ಅಭಿವೃದ್ಧಿ ಚುರುಕಾಗಬೇಕಾಗಿದೆ ಎಂದು ಲೋಕಸಭೆಯಲ್ಲಿಂದು ತುಮಕೂರು ಸಂಸದ ಮುದ್ದಹನುಮೇಗೌಡ ಸರ್ಕಾರಕ್ಕೆ ಮನವಿ ಮಾಡಿದರು.

ಈ ಜಿಲ್ಲೆಗಳ ಸಮಸ್ಯೆ ಪರಾಮರ್ಶೆಗೆ ಬೆಂಗಳೂರು, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿಯಲ್ಲಿ ಮೂರು ನ್ಯಾಯಪೀಠಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರಾವಾಡ ನಗರಗಳು ಹೈದರಾಬಾದ್-ಕರ್ನಾಟಕ ವಲಯದಿಂದ ದೂರಇರುವ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಹೆಚ್ಚು ಅನುಕೂಲವಾಗುತ್ತಿಲ್ಲ. ಈ ಎರಡು ಪೀಠಗಳನ್ನು ಕಾರ್ಯ ನಿರ್ವಹಿಸುತ್ತಿರುವ ಕಲಬುರಗಿ ಪೀಠದೊಂದಿಗೆ ಸೇರ್ಪಡೆಗೊಳಿಸಿದರೆ, ಹೈದರಾಬಾದ್-ಕರ್ನಾಟಕ ವಲಯದ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಅವರು ಸಲಹೆ ಮಾಡಿದರು


ಸಂಬಂಧಿತ ಟ್ಯಾಗ್ಗಳು

Lok Sabha Muddahanumegowda ಸೇರ್ಪಡೆ ನ್ಯಾಯಪೀಠ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ