ಇತ್ತ ಕೆಲಸವೂ ಇಲ್ಲ, ಅತ್ತ ಸಂಬಳವೂ ಇಲ್ಲ...!

bbmp contract labourers protested in front of bbmp office

01-08-2018

ಬೆಂಗಳೂರು: ಇದ್ದಕ್ಕಿದ್ದಂತೆ ಇವತ್ತಿನಿಂದ ನೀವು ಕೆಲಸಕ್ಕೆ ಬರಬೇಡಿ ಎಂದರೆ ಎಂಥವರಿಗೂ ಹೇಗಾಗಬೇಡ ಹೇಳಿ? ಹೌದು ಇಂಥದೊಂದು ಘಟನೆ ನಗರದ ಬ್ಯಾಟರಾಯಪುರದಲ್ಲಿ ನಡೆದಿದೆ. ಅಧಿಕಾರಿಗಳು ಹಾಗು ಕಂಟ್ರಾಕ್ಟರ್ ಗಳ ಷಡ್ಯಂತ್ರಕ್ಕೆ ಗುತ್ತಿಗೆ ಪೌರ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಇತ್ತ ಸಂಬಳವೂ ಇಲ್ಲ ಅತ್ತ ಕೆಲಸವೂ ಇಲ್ಲದಂತಾಗಿದೆ ಗುತ್ತಿಗೆ ಪೌರ ಕಾರ್ಮಿಕರ ಸ್ಥಿತಿ.

ಬ್ಯಾಟರಾಯನಪುರ ವಲಯ ಒಂದರಲ್ಲೆ ಸುಮಾರು 70ಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಕೆಲಸದಿಂದ ಗೇಟ್ ಪಾಸ್ ನೀಡಲಾಗಿದೆ. ಈ ಕುರಿತು ಬ್ಯಾಟರಾಯನಪುರ ವಲಯ ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ ಗುತ್ತಿಗೆ ಕಾರ್ಮಿಕರು.

ಕಂಟ್ರಾಕ್ಟ್ ಪದ್ಧತಿ ಇದ್ದಾಗ ಪೌರ ಕಾರ್ಮಿಕರ ಮಾಹಿತಿಯನ್ನು ವೆಬ್ ಸೈಟ್ ಗೆ ಹಾಕದ ಗುತ್ತಿಗೆದಾರರು, ಹತ್ತು ವರ್ಷದಿಂದ ಕೆಲಸ ಮಾಡಿದ್ದರೂ ಬಯೋಮೆಟ್ರಿಕ್ ರಿಜಿಸ್ಟ್ರೇಷನ್ ಮಾಡಿಸದೆ ಬೇಜವಾಬ್ದಾರಿ ತೋರಿದ್ದಾರೆ. ಪಿಎಫ್, ಇಎಸ್ಐ ಸಹ ಪಾವತಿ ಮಾಡಿಲ್ಲ. ಸಾಕಷ್ಟು ವರ್ಷಗಳಿಂದ ಕೆಲಸ ಮಾಡಿದ್ದರೂ ಈಗ ಬರಬೇಡಿ ಅಂತಿದ್ದಾರೆಂದು ಪೌರ ಕಾರ್ಮಿಕರು ನೋವು ತೋಡಿಕೊಂಡಿದ್ದಾರೆ. ಮುಂದೆ ನಮ್ಮ ಜೀವನಕ್ಕೆ ಆಧಾರ ಏನು ಎಂದು ಪೌರಕಾರ್ಮಿಕರು ನ್ಯಾಯಕ್ಕಾಗಿ ಪ್ರತಿಭಟಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Contract labourers Protest ಪೌರಕಾರ್ಮಿಕ ನ್ಯಾಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ