ಮಾಲಿನ್ಯ ನಿಯಂತ್ರಣಕ್ಕೆ ಇತರೆ ಮಾರ್ಗ ಬೇಕು: ಪರಮೇಶ್ವರ್

we need Another way to control Air pollution: Parameshwar

01-08-2018

ಬೆಂಗಳೂರು: ಮಾಲಿನ್ಯ ನಿಯಂತ್ರಣಕ್ಕೆ ನಗರದ ಕೆಲವು ಭಾಗಗಳನ್ನು ಆಯ್ದು ಪ್ರಾಯೋಗಿಕವಾಗಿ ಏರ್‌ ಕ್ವಾಲಿಟಿ ಕಂಟ್ರೋಲ್‌ನನ್ನು ಅನುಷ್ಠಾನ ಮಾಡಲು ಲಂಡನ್ ಮಹಾನಗರ, ಸಿ40 ಸಿಟಿಸ್ ‌ನೊಂದಿಗೆ ಬಿಬಿಎಂಪಿ ಒಪ್ಪಿದೆ.

ಖಾಸಗಿ ಹೋಟೆಲ್‌ನಲ್ಲಿ ಲಂಡನ್ ಉಪಮೇಯರ್ ಹಾಗೂ ಸಿ40 ಸಿಟಿ ಹಾಗೂ ಬಿಬಿಎಂಪಿ ಸಹಯೋಗದೊಂದಿಗೆ ನಿನ್ನೆ ವಿಚಾರಗೋಷ್ಠಿ‌ ನಡೆಸಲಾಗಿತ್ತು. ಈ ವೇಳೆ‌ ನಗರ ಮಾಲಿನ್ಯ ನಿಯಂತ್ರಣದ ಬಗ್ಗೆ ವಿಚಾರ ಮಂಡನೆಯಾಗಿತ್ತು. ಇಂದೂ ಕೂಡ ವಿಧಾನಸೌಧದಲ್ಲಿ ಲಂಡನ್ ಉಪಮೇಯರ್‌‌ ಶಿರ್ಲಿ ರೋಡ್ರಿಗಸ್ ಹಾಗೂ ಪ್ರತಿನಿಧಿಗಳು ಆಗಮಿಸಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರನ್ನು ಭೇಟಿ‌ ಮಾಡಿ ಚರ್ಚಿಸಿದರು.

ಕಳೆದ 10ವರ್ಷದಲ್ಲಿ ಬೆಂಗಳೂರು ಹೆಚ್ಚು ಬೆಳೆದಿದೆ. ಮಾಲಿನ್ಯ ಪ್ರಮಾಣ ಕೂಡ ಹೆಚ್ಚಿದೆ. ಆದರೆ, ದೆಹಲಿ, ಮುಂಬೈಗೆ ಹೋಲಿಸಿದರೆ ಮಾಲಿನ್ಯ ಪ್ರಮಾಣ ನಮ್ಮಲ್ಲಿ ‌ಕಡಿಮೆ‌ ಇದೆ ಎಂಬುದು ಸಮಾಧಾನದ ಸಂಗತಿ. ಆದರೂ ಮಾಲಿನ್ಯ ಪ್ರಮಾಣದ ಬಗ್ಗೆ ಈಗಿನಿಂದಲೇ ಚಿಂತಿಸಬೇಕಿದೆ.

ಅದಕ್ಕೆ ಪೆಟ್ರೋಲ್, ಡೀಸೆಲ್ ಚಾಲಿತ ವಾಹನಗಳ ನೋಂದಣಿಯನ್ನು ನಿಲ್ಲಿಸುವ ಅಗತ್ಯವಿದೆ. ಸಿಎನ್‌ಜಿ, ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸಬೇಕಿದೆ. ಇದರಿಂದ ಒಂದಷ್ಟು ಪ್ರಮಾಣದ ಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ ಎಂದು ಪರಮೇಶ್ವರ್ ಹೇಳಿದರು.

ಲಂಡನ್‌ನಲ್ಲಿ ಈಗಾಗಲೇ ಎಲೆಕ್ಟ್ರಿಕ್ ಬಸ್‌ಗಳು ಇದೆ. ಅಲ್ಲಿ ಮಾಲಿನ್ಯ ನಿಯಂತ್ರಣ, ಕ್ವಾಲಿಟಿ ಏರ್ ಕೂಡ ಇದೆ. ಈ ಮಾದರಿಯಲ್ಲಿ ಬೆಂಗಳೂರಿನಲ್ಲೂ ಆಗಬೇಕಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಕಸ ಸಂಸ್ಕರಣೆ, ಟ್ರಾಫಿಕ್ ನಿರ್ವಹಣೆ ಕೂಡ ಆಗಬೇಕು. ಇದಕ್ಕೆ ಲಂಡನ್‌ನ ಯೋಜನೆ ಇಲ್ಲಿ ಅನುಷ್ಠಾನ ಆಗಬೇಕಿದೆ. ನಗರದ ಮೂಲ ಸಮಸ್ಯೆ ಬಗೆ ಹರಿಯಬೇಕು ಎಂದು ಹೇಳಿದರು.

ಟೆಂಡರ್‌ ಶ್ಯೂರ್ ಯೋಜನೆಯಡಿ ಸೈಕಲಿಂಗ್ ಟ್ರಾಕ್ ಅಗತ್ಯದ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಲಾಯಿತು ಮತ್ತು  ಕೆರೆಗಳಲ್ಲಿ ನೊರೆ ಸಮಸ್ಯೆ ಬಗ್ಗೆ ಕೂಡ ಚರ್ಚಿಸಲಾಯಿತು. ಇದನ್ನು ಈ ಯೋಜನೆಯಡಿ ಕೈಗೊಂಡರೆ ಈ ಸಮಸ್ಯೆ ನಿವಾರಣೆಗೆ ಸಹಕಾರವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ