ಕಿಕಿ ಡ್ಯಾನ್ಸ್ ಬಹಳ ಅಪಾಯಕಾರಿ: ಡಾ.ಜಿ.ಪರಮೇಶ್ವರ್

DCM parameshwar Requested to don

01-08-2018

ಬೆಂಗಳೂರು: ದೇಶಾದ್ಯಂತ ಹಬ್ಬುತ್ತಿರುವ ಕಿಕಿ ಡ್ಯಾನ್ಸ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ವೈರಲ್ ಆಗಿರುವ ಈ ಚಾಲೆಂಜ್ ಅನ್ನು ಹಲವರು ಸ್ವೀಕರಿಸುತ್ತಿದ್ದು, ಡ್ಯಾನ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಇದು ಎಲ್ಲೆಡೆ ವೇಗವಾಗಿ ಹಬ್ಬುತ್ತಿದೆ. ಈ ಡ್ಯಾನ್ಸ ಸಂಚಾರಿ ನಿಯಮಗಳಿಗೆ ವಿರೋಧ ಮತ್ತು ಪ್ರಾಣಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಗಳಿವೆ. ನಿನ್ನೆಯಷ್ಟೆ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಕೂಡ ಕಿಕಿ ಡ್ಯಾನ್ ಮಾಡಿದ್ದರು. ಡ್ಯಾನ್ಸ್ ಸಂಬಂಧ ಇವರ ವಿರುದ್ಧ ತೀವ್ರ ಆಕ್ಷೇಪಣೆಗಳು ವ್ಯಕ್ತವಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.

ಇನ್ನು ವೈರಲ್ ಆಗಿ ಹಬ್ಬುತ್ತಿರುವ ಕಿಕಿ ಡ್ಯಾನ್ ಕುರಿತು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ. ಕಿಕಿ ಡ್ಯಾನ್ಸ್ ಚಾಲೆಂಜ್ ಸ್ವೀಕರಿಸದಂತೆ ಟ್ವೀಟ್ ಮಾಡುವ ಮೂಲಕ ಮನವಿ ಮಾಡಿದ್ದಾರೆ. ಕಿಕಿ ಡ್ಯಾನ್ಸ್ ಬಹಳ ಅಪಾಯಕಾರಿ, ನಿಮ್ಮ ಜೀವಕ್ಕೂ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಹೀಗಾಗಿ ಪೋಷಕರು ತಮ್ಮ ಮಕ್ಕಳು ಕಿಕಿ ಡ್ಯಾನ್ಸ್ ಮಾಡದಂತೆ ಜಾಗೃತಿ ವಹಿಸಿ ಎಂದು ಟ್ವೀಟ್ ಮಾಡಿ ಎಚ್ಚರಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

G. Parameshwara Kiki dance ಟ್ವೀಟ್ ಪೋಷಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ