ಬಿಗ್‍ ಬಾಸ್ ಸ್ಪರ್ಧಿ ನಿವೇದಿತಾ ಗೌಡ ವಿರುದ್ಧ ಕೇಸ್

kiki dance: case filed against niveditha gowda

01-08-2018

ಬೆಂಗಳೂರು: ಕಿಕಿ ಡ್ಯಾನ್ಸ್ ಮಾಡುವ ಮೂಲಕ ಸಂಚಾರ ನಿಯಮ ಉಲ್ಲಂಘನೆಗೆ ಪ್ರಚೋದನೆ ನೀಡಿರುವ ಆರೋಪ ಎದುರಿಸುತ್ತಿರುವ ಬಿಗ್‍ ಬಾಸ್ ಸ್ಪರ್ಧಿ ನಿವೇದಿತಾ ಗೌಡ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

ನಿವೇದಿತಾ ಕಿಕಿ ಚಾಲೆಂಜ್‍ಗಾಗಿ ಇಂಗ್ಲಿಷ್ ಹಾಡಿಗೆ ಹೆಜ್ಜೆ ಹಾಕಿದ್ದು, ಬೇಬಿ ಡಾಲ್ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತಲ್ಲದೇ ಇದು ಅಪಾಯಕಾರಿ ಎಂದು ಗೊತ್ತಿದ್ದರೂ ಸವಾಲು ಸ್ವೀಕರಿಸಿದ್ದಕ್ಕೆ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲೇ ಇಂದು ಕನ್ನಡ ಒಕ್ಕೂಟ ಸಂಘಟನೆಯಿಂದ ನಗರದ ಹಲಸೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಕಿಕಿ ಡ್ಯಾನ್ಸ್ ಮೂಲಕ ಸಂಚಾರ ನಿಯಮ ಉಲ್ಲಂಘನೆಗೆ ಪ್ರಚೋದನೆ ಮಾಡಿ ಸಂಚಾರಿ ಸಮಸ್ಯೆಗೆ ತೊಂದರೆ ಮಾಡಿರುವ ನಿವೇದಿತಾ ಗೌಡ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಹೇಳಲಾಗಿದೆ. ಇದು ಅಪಾಯಕಾರಿ ಎಂದು ಗೊತ್ತಿದ್ದರೂ ಚಾಲೆಂಜ್ ಸ್ವೀಕರಿಸಿದ್ದಕ್ಕೆ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಕಿಕಿ ಡ್ಯಾನ್ಸ್ ಮಾಡಿರುವ ನಿವೇದಿತಾ ಗೌಡ ಅವರು ತಮ್ಮ ಅಭಿಮಾನಿಗಳಿಗೆ ನಾನು ಖಾಲಿ ರಸ್ತೆಯಲ್ಲಿ ಕಿಕಿ ಡ್ಯಾನ್ಸ್ ಮಾಡಿದ್ದು ಏನು ತೊಂದರೆಯಾಗಿಲ್ಲ. ಆದರೆ ಕಿಕಿ ಡ್ಯಾನ್ಸ್ ಚಾಲೆಂಜ್ ಅನ್ನು ಸ್ವೀಕರಿಸಬೇಡಿ ಎಂದು ಮನವಿ ಮಾಡಿದ್ದಾರೆ.

ದೇಶದೆಲ್ಲೆಡೆ ಇದೀಗ `ಕಿಕಿ ಚಾಲೆಂಜ್'ಗೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಂತೆ ಪೋಲಿಸರು ಮುಂಜಾಗೃತ ಕ್ರಮ ಕೈಗೊಂಡಿದ್ದಾರೆ, ಆದರೆ ಕಿಕಿ ಚಾಲೆಂಜ್ ಸ್ವೀಕರಿಸಿದ್ದ ನಿವೇದಿತಾ ಗೌಡ ಓಡುವ ಕಾರಿನಿಂದ ಇಳಿದು ಹೆಜ್ಜೆ ಹಾಕಿದಲ್ಲದೇ ಫೇಸುಬುಕ್‍ನಲ್ಲಿ ಪೋಸ್ಟ್ ಮಾಡಿದ್ದರು.


ಸಂಬಂಧಿತ ಟ್ಯಾಗ್ಗಳು

Kiki dance niveditha gowda ಚಾಲೆಂಜ್ ಅಪಾಯಕಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ