ಪ್ರತ್ಯೇಕ ರಾಜ್ಯ ಬೇಡ...

Kannada organisations protest against division issue of karnataka

01-08-2018

ಚಾಮರಾಜನಗರ: ಅಖಂಡ ಕರ್ನಾಟಕ ಉಳಿಸುವಂತೆ ಆಗ್ರಹಿಸಿ ಚಾಮರಾಜನಗರದಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಜಿಲ್ಲಾಡಳಿತ ಭವನದ ಮುಖ್ಯ ದ್ವಾರದ ಎದುರು ಕನ್ನಡ ಧ್ವಜ ಹಿಡಿದ ನೂನಾರು ಕಾರ್ಯಕರ್ತರು ಅಖಂಡ ಕರ್ನಾಟಕಕ್ಕೆ ಒಕ್ಕೊರಲಿನಿಂದ ಕೂಗಿ, ಪ್ರತ್ಯೇಕ ರಾಜ್ಯ ಬೇಡ ಎಂದು ಒತ್ತಾಯಿಸಿದ್ದಾರೆ. ಅರೆ ಬೆತ್ತಲೆ ಮತ್ತು ಉರುಳು ಸೇವೆ ಮಾಡುವ ಮೂಲಕ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಪ್ರತ್ಯೇಕತೆ ವಿರುದ್ಧ ಹೋರಾಟ ನಡೆಸಿದ್ದಾರೆ. ರಾಜಕೀಯ ಪಿತೂರಿಯಿಂದ ಕೆಲವರು ಪ್ರತ್ಯೇಕ ರಾಜ್ಯ ಕೂಗು ಎಬ್ಬಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ