ಆದಿವಾಸಿಗಳಿಗೆ ಉಚಿತ ಆರೋಗ್ಯ ಸೇವೆಗೆ ಚಾಲನೆ

New health scheme launched to tribes

01-08-2018

ಬೆಂಗಳೂರು: ಅರಣ್ಯದಲ್ಲಿನ ಬುಡಕಟ್ಟು ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ, ಸಂಚಾರಿ ಆರೋಗ್ಯ ಘಟಕ ಸೇವೆಗೆ ವಿಧಾನಸೌಧದ ಮುಂಬಾಗದಲ್ಲಿ ಉಪ ಮುಖ್ಯ ಮಂತ್ರಿ ಪರಮೇಶ್ವರ್ ಚಾಲನೆ ‌ನೀಡಿದರು.

ಉಚಿತ ಆರೋಗ್ಯ ಸೇವೆ ನೀಡುವುದು ಕಾರ್ಯಕ್ರಮದ ಉದ್ದೇಶ. ಪರಿಶಿಷ್ಟ ಪಂಗಡಗಳ ಇಲಾಖೆ ಹಾಗೂ ಬೆಳಗಾವಿಯ ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆ ಸಹಯೋಗದಲ್ಲಿ ಆರೋಗ್ಯ ಸೇವೆ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿದೆ. 8 ಕೋಟಿ ವೆಚ್ಚದಲ್ಲಿ 16 ವಾಹನಗಳನ್ನು ನಿರ್ಮಾಣ ಮಾಡಲಾಗಿದೆ. ಆದಿವಾಸಿಗಳ ಮನೆ ಬಾಗಿಲಿಗೆ ಉಚಿತ ಆರೋಗ್ಯ ಸೇವೆ ದೊರೆಯಲಿದ್ದು, 8 ಜಲ್ಲೆಗಳಲ್ಲಿ ಸೇವೆ ವಾಹನಗಳು ಸಂಚರಿಸಲಿವೆ. ಮೊದಲ ಹಂತದಲ್ಲಿ ಕೊಡಗು, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಕಾರ್ಯಕ್ರಮ ಅನುಷ್ಠಾನವಾಗಲಿದೆ. ಪ್ರತಿದಿನ 2 ಗ್ರಾಮಗಳಿಗೆ ಭೇಟಿ ನೀಡಲಿರುವ ಆರೋಗ್ಯ ಘಟಕಗಳು ಓರ್ವ ವೈದ್ಯರು, ಒಬ್ಬರು ನರ್ಸ್ ಘಟಕದಲ್ಲಿ ಸೇವೆ ಸಲ್ಲಿಸುವರು ಎಂದು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ