ವಿಪಕ್ಷಗಳು ಅವರ ಇತಿ ಮಿತಿಯಲ್ಲಿ ಟೀಕೆ ಮಾಡಿದ್ರೆ ಒಳ್ಳೆಯದು !

Kannada News

30-05-2017

ಬೆಂಗಳೂರು:- ಡಾ. ರಾಜ್ ಕುಮಾರ್ ರಸ್ತೆಯಿಂದ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಕೆಳಸೇತುವೆಯನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದ್ದಾರೆ. ಇಂದಿನಿಂದಲೆ  ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಿದೆ.  ಸೇತುವೆಯ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಬಿಬಿಎಂಪಿ ಮೇಯರ್ ಪದ್ಮಾವತಿ, ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ಮಲ್ಲೇಶ್ವರಂ ಕ್ಷೇತ್ರದ ಶಾಸಕ ಅಶ್ವತ್ಥ ನಾರಾಯಣರ, ಉಪಸ್ಥಿತಿತರಿದ್ದರು. ೧೪.೬೫ ಕೋಟಿ ವೆಚ್ಚದಲ್ಲಿ ಬಿಬಿಎಂಪಿ ನಿರ್ಮಾಣ ಮಾಡಿರುವ ಕೆಳಸೇತುವೆ-ವಿವೇಕಾನಂದ ಕಾಲೇಜು‌ ಮುಂಭಾಗ ನಿರ್ಮಾಣವಾಗಿದೆ. ಉದ್ಘಾಟನೆಯ ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶಾಸಕ ಗೋಪಾಲಯ್ಯ ನಮ್ಮ ಹಳೆಯ ಗಿರಾಕಿ, ಈಗ ಮಾತ್ರ ನಮ್ಮ ಜೊತೆ ಇಲ್ಲ ಅಷ್ಟೇ,  ಆದರೆ ರಾಜಕೀಯವಾಗಿ ದೂರ ಇದ್ದರೂ ವೈಯಕ್ತಿಕವಾಗಿ ನಮ್ಮ ಜೊತೆ ಇದ್ದಾರೆ ಎಂದರು, ಗೋಪಾಲಯ್ಯ ಅನುದಾನಕ್ಕಾಗಿ ನಮ್ಮ ಬಳಿ ಬರ್ತಾರೆ, ಹಾಗಾಗಿ ಅನುದಾನ ಕೊಟ್ಟಿದ್ದೇನೆ, ಆದರೆ ಮಲ್ಲೇಶ್ವರಂ ಶಾಸಕ ಡಾ. ಅಶ್ವಥ್ ನಾರಾಯಣ ನಮ್ಮ ಬಳಿ ಬರಲಿಲ್ಲ ಎಂದ ಅವರು, ರಾಜಾಜಿನಗರದ ಜನರಿಗೆ ಸಹಾಯ ಆಗಲಿ ಅಂತಾ ಸ್ಟೀಲ್ ಬ್ರಿಡ್ಜ್ ಮಾಡಲು ಹೊರಟಿದ್ದೆವು, ಆದರೆ ನಾಲಿಗೆ ತಿರುಗುತ್ತೆ ಅಂತಾ ಹೇಗೆಲ್ಲಾ ಮಾತನಾಡಿದ್ರು, ಸಿದ್ದರಾಮಯ್ಯ ನ ಮನೆಗೆ ಸೂಟ್ ಕೇಸ್ ಹೊಂಟೋಯ್ತು ಅಂದ್ರು, ಅದೇ ನಡ್ಕೊಂಡು ಬಂತಾ ಏನೋ ಗೊತ್ತಿಲ್ಲ, ಅದೇ ರೀತಿ‌ ವಾಪಸ್  ಹೋಯ್ತಾ ಗೊತ್ತಿಲ್ಲ, ಸುಮ್ಮನೆ ಜನರ ಹತ್ತಿರ ಬೈಸಿಕೊಳ್ಳೋದು ಯಾಕೆ ಅಂತಾ ನಾನೇ ಜಾರ್ಜ್ ಗೆ ಯೋಜನೆ ಕ್ಯಾನ್ಸಲ್ ಮಾಡಿ ಅಂತಾ ಹೇಳಿದೆ. ವಿಪಕ್ಷದವರು ಅವರ ಇತಿ ಮಿತಿಯಲ್ಲಿ ಟೀಕೆ ಮಾಡಿದ್ರೆ ಒಳ್ಳೆಯದು ಎಂದು ಪ್ರತಿಕ್ರಿಯಿಸಿದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ