ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಕುಖ್ಯಾತ ರೌಡಿ ಸುನೀಲ್

Mayasandra Rowdy sunil arrested by police

31-07-2018

ಬೆಂಗಳೂರು: ರೌಡಿ ಚಟುವಟಿಕೆಗಳಲ್ಲಿ ಕುಖ್ಯಾತಿ ಹೊಂದಿ ರಿಯಲ್ ಎಸ್ಟೇಲ್ ಹವಾ ಸೃಷ್ಠಿಸಲು ರೌಡಿ ಜಯಂತ್‍ನನ್ನು ಅಪಹರಿಸಿ ಸಹಚರರ ಜೊತೆ ಸೇರಿ ಬಿಯರ್ ಬಾಟಲಿನಿಂದ ಮನಸೋ ಇಚ್ಛೆ ಚುಚ್ಚಿ ಭೀಕರವಾಗಿ ಕೊಲೆಗೈದಿದ್ದ ರೌಡಿ ಸುನಿಲ್‍ನನ್ನು ಅತ್ತಿಬೆಲೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಬಂಧಿತ ಆನೇಕಲ್‍ನ ಮಾಯಸಂದ್ರದ ರೌಡಿ ಸುನಿಲ್(24)ಮಾಯಸಂದ್ರದ ರೌಡಿ ಜಯಂತ್(23)ನನ್ನು ಕಳೆದ ಜುಲೈ 1ರಂದು ಅಪಹರಿಸಿ ಗೆರಟಿಗನಬೆಲೆಯ ನೀಲಗಿರಿ ತೋಪಿಗೆ ಕರೆದೊಯ್ದು ಬಿಯರ್ ಬಾಟಲಿನಿಂದ ಸುಮಾರು 50 ಕಡೆ ಚುಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದನು.

ರೌಡಿ ಸುನಿಲ್ ಹೊಸಕೋಟೆ ಬಳಿ ಅಡಗಿರುವ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸುನಿಲ್ ಕೊಲೆ, ದಾಂಧಲೆ, ಬೆದರಿಕೆ ಇನ್ನಿತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಅತ್ತಿಬೆಲೆ ಠಾಣೆಯ ರೌಡಿಪಟ್ಟಿಯಲ್ಲಿದ್ದಾನೆ. ಕೊಲೆಯಾಗಿರುವ ಜಯಂತ್ ಕೂಡ ಇದೇ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದನು.

ರೌಡಿಸಂನಲ್ಲಿ ಹೆಸರು ಮಾಡಿ ರಿಯಲ್ ಎಸ್ಟೇಟಿನಲ್ಲಿ ಹವಾ ಸೃಷ್ಟಿಸುವ ಹಿನ್ನಲೆಯಲ್ಲಿ ಜಯಂತ್ ಕೊಲೆ ಮಾಡಿರುವುದನ್ನು ಸುನಿಲ್ ಬಾಯ್ಬಿಟ್ಟಿದ್ದಾನೆ ಕಳೆದ ಜು.1 ರಂದು ಜಯಂತ್ ನನ್ನು ಅಪಹರಿಸಿ ಶೆಟ್ಟಹಳ್ಳಿ ಬಳಿಯ ಲೇಔಟ್ ನಲ್ಲಿ ಈ ಹತ್ಯೆ ಮಾಡಲಾಗಿದ್ದು, ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಗೆರಟಿಗನಬೆಲೆಯ ನೀಲಗಿರಿ ತೋಪಿನಲ್ಲಿ ಜಯಂತ್ ಮೃತ ದೇಹವನ್ನು ಬಿಸಾಕಿ ಹೋಗಿದ್ದರು.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳಾದ ಲೋಕೇಶ್ ಹಾಗೂ ಪ್ರವೀಣ್ ನನ್ನು ಕೆಲದಿನಗಳ ಹಿಂದಷ್ಟೇ ಬಂಧಿಸಿಲಾಗಿದೆ. ಈ ಪ್ರಕರಣದಲ್ಲಿ ಇನ್ನು ಐವರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಶೋಧ ನಡೆಸಲಾಗಿದೆ ಎಂದು ಗ್ರಾಮಾಂತರ ಎಸ್‍ಪಿ ಶಿವಕುಮಾರ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rowdy Murder ನೀಲಗಿರಿ ಪ್ರಕರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ