ಹಸುವಿನ ಮೇಲೆ ಹೀನ ಕೃತ್ಯ!

improper behaviour with cow

31-07-2018

ಬೆಂಗಳೂರು: ವಿಕೃತ ಕಾಮುಕನೊಬ್ಬ ಹಸುವಿನ ಜೊತೆ ಕಾಮತೃಷೆ ತೀರಿಸಿಕೊಳ್ಳಲು ಮುಂದಾಗಿರುವ ವಿಚಿತ್ರ ಘಟನೆ ಕೆ.ಆರ್.ಪುರಂನ ದೇವಸಂದ್ರದಲ್ಲಿ ನಿನ್ನೆ ಬೆಳಗಿನ ಜಾವ ನಡೆದಿದೆ. ಕಾಮುಕರಿಂದ ಹೆಣ್ಣುಮಕ್ಕಳನ್ನು ರಕ್ಷಿಸಬೇಕು ಎನ್ನುವ ಒತ್ತಾಯ ಕೇಳಿಬರುತ್ತಿರುವ ಸಮಯದಲ್ಲೇ ಈಗ ಹಸುಗಳನ್ನೂ ಕಾಪಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ದೇವಸಂದ್ರದಲ್ಲಿ ಮುನಿರಾಜು ಹಾಗೂ ರತ್ನ ದಂಪತಿಯ ಎರಡು ಹಸುಗಳನ್ನು ಕಳ್ಳರು ಕಳವು ಮಾಡಿದ್ದರು. ಈ ಸಂಬಂಧ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೇಸ್ ದಾಖಲಿಸಿಕೊಂಡು ಪೊಲೀಸರು ಸಿಸಿಟಿವಿಗಳ ಪರಿಶೀಲನೆ ನಡೆಸಿದಾಗ ಕಾಮುಕನ ವಿಕೃತಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಹಸು ಕಳ್ಳರಿಗಾಗಿ ಹುಡುಕಾಟ ನಡೆಸುತ್ತಿರುವ ಪೊಲೀಸರು, ಈಗ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವಿಕೃತ ಕಾಮುಕನನ್ನೂ ಹುಡುಕುವಂತಾಗಿದೆ.


ಸಂಬಂಧಿತ ಟ್ಯಾಗ್ಗಳು

cow CCTV ದೃಶ್ಯ ವಿಕೃತ ಕಾಮುಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ