ಸ್ಯಾಂಡಲ್ ವುಡ್ ಖಳನಟ ಧರ್ಮ ವಿರುದ್ಧ ದೂರು ದಾಖಲು!

complaint lodged against  kannada actor dharma

31-07-2018

ಬೆಂಗಳೂರು: ಚಿತ್ರೀಕರಣದ ನೆಪದಲ್ಲಿ ಮಹಿಳೆಯೊಬ್ಬರನ್ನು ಕರೆಸಿಕೊಂಡು ಊಟಕ್ಕೆ ಕರೆದೊಯ್ದ ಅಶ್ಲೀಲ ದೃಶ್ಯ ಚಿತ್ರೀಕರಿಸಿ ಬ್ಲಾಕ್‍ ಮೇಲ್ ಮಾಡುತ್ತಿದ್ದಾರೆ ಎಂದು ಸ್ಯಾಂಡಲ್‍ ವುಡ್ ಖಳನಟ ಧರ್ಮ ವಿರುದ್ಧ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.

ಚಿತ್ರೀಕರಣದ ನೆಪದಲ್ಲಿ ನನ್ನನ್ನು ಕರೆಸಿಕೊಂಡು ತಂಪು ಪಾನೀಯದಲ್ಲಿ ಮತ್ತು ಬರಿಸುವ ಔಷಧಿ ಹಾಕಿ ಅಶ್ಲೀಲ ವಿಡಿಯೋ ಮಾಡಿ 14 ಲಕ್ಷ ರೂಗಳನ್ನು ಸುಲಿಗೆ ಮಾಡಿ ಮತ್ತಷ್ಟು ಹಣಕ್ಕೆ ಬೇಡಿಕೆಯಿಟ್ಟು ಬ್ಲಾಕ್‍ ಮೇಲ್ ಮಾಡುತ್ತಿದ್ದಾರೆ ಎಂದು ಮಹಿಳೆಯು ದೂರಿನಲ್ಲಿ ತಿಳಿಸಿದ್ದಾರೆ.

ಅಶ್ಲೀಲ ವಿಡಿಯೋವನ್ನು ನನ್ನ ಮನೆಯವರಿಗೆ ಕಳಿಸುವುದಾಗಿ ಬೆದರಿಕೆ ಹಾಕಿ 14 ಲಕ್ಷ ಹಣ ಸುಲಿಗೆ ಮಾಡಿದ್ದಾರೆ ಎಂದು ಮಹಿಳೆಯು ದೂರು ನೀಡಿದ್ದು ಇದನ್ನು ಆಧರಿಸಿ ನಟ ಧರ್ಮ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ

35 ವರ್ಷದ ಮಹಿಳೆ ಜೂನ್ 6ರಂದು ಈ ದೂರು ನೀಡಿದ್ದು, ಐಪಿಸಿ ಸೆಕ್ಷನ್ 506 ಮತ್ತು 484 ರ ಅಡಿಯಲ್ಲಿ ಧರ್ಮ ಮತ್ತು ಅವರ ಕಾರು ಚಾಲಕ ನವೀನ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಮೂರು ತಿಂಗಳ ಹಿಂದೆ ಮಹಿಳೆಯೊಬ್ಬರನ್ನ ರಾಜರಾಜೇಶ್ವರಿ ನಗರಕ್ಕೆ ಶೂಟಿಂಗ್ ಇದೆ ಎಂದು ನಟ ಧರ್ಮ ಕರೆಸಿಕೊಂಡಿದ್ದರಂತೆ. ತನ್ನ ಕಾರು ಚಾಲಕ ನವೀನ್ ಮೂಲಕ ಕರೆಸಿಕೊಂಡಿದ್ದ ಅವರು ಮಹಿಳೆ ಬಂದ ತಕ್ಷಣ ಚಿತ್ರೀಕರಣ ರದ್ದಾಗಿದೆ ಎಂದು ಹೋಟೆಲ್ ಒಂದಕ್ಕೆ ಊಟದ ನೆಪದಲ್ಲಿ ಕರೆದೊಯ್ದಿದ್ದರು. ಊಟವಾದ ನಂತರ ತಂಪು ಪಾನೀಯದಲ್ಲಿ ಮತ್ತು ಬರುವ ಔಷಧಿ ಹಾಕಿ ಮಹಿಳೆಗೆ ಕೊಟ್ಟಿದ್ದಾರೆ. ಅದನ್ನು ಕುಡಿದ ಮಹಿಳೆ ಪ್ರಜ್ಞೆ ತಪ್ಪಿದಾಗ ನಟ ಧರ್ಮ ಮತ್ತು ಚಾಲಕ ನವೀನ್ ಅಶ್ಲೀಲ ವಿಡಿಯೋ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಿಡಿಯೋ ಮನೆಯವರಿಗೆ ಕಳಿಸುವುದಾಗಿ ಧರ್ಮ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ. ವಿಡಿಯೋ ಬಹಿರಂಗವಾಗುವುದು ಬೇಡ ಅನ್ನೋದಾದರೆ ಹಣ ಕೊಡಬೇಕು ಎಂದು ಇದುವರೆಗೆ 14 ಲಕ್ಷ ಹಣ ವಸೂಲಿ ಮಾಡಿ ಇನ್ನಷ್ಟು ಹಣ ಬೇಕು ಎಂದು ಒತ್ತಾಯ ಮಾಡುತ್ತಿರುವ ಆರೋಪ ಧರ್ಮ ವಿರುದ್ಧ ಕೇಳಿ ಬಂದಿದೆ.

ಈ ಬಗ್ಗೆ ಮಹಿಳೆ ತನ್ನ ಗಂಡನಿಗೆ ನಡೆದ ಎಲ್ಲ ವಿಷಯ ತಿಳಿಸಿ ಈಗ ಬೇಗೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೂನ್ 6ರಂದೇ ದೂರು ನೀಡಿದ್ದರೂ ಪೊಲೀಸರು ನಟ ಧರ್ಮ ಮತ್ತು ಆತನ ಚಾಲಕ ನವೀನ್‍ನನ್ನು ಇದುವರೆಗೂ ಬಂಧಿಸಿಲ್ಲ. ಇಬ್ಬರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಸಬೂಬು ಹೇಳುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Actor complaint ಬಹಿರಂಗ ಶೂಟಿಂಗ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ