ಮೈಸೂರು ಪ್ಯಾಲೆಸ್ ಮುಂದೆ ಸೆಲ್ಫಿಗೆ ಪೊಲೀಸರ ಕಿರಿಕಿರಿ!

police not are allowing to selfie in front of mysore palace!

31-07-2018

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆ ನೋಡಲು ಪ್ರತಿದಿನ ಸಾವಿರಾರು ಜನರು ಬಂದು ಅರಮನೆಯ ಸೌಂದರ್ಯವನ್ನು, ಕೆತ್ತನೆಗಳನ್ನು, ಒಳಗಿನ ಅಧ್ಭುತ ವಿನ್ಯಾಸಗಳನ್ನು ಕಣ್ತುಂಬಿಕೊಂಡು ಸಂತಸಪಡುತ್ತಾರೆ. ಇನ್ನು ಮೈಸೂರಿಗೆ ಬಂದು ಅರಮನೆ ಜೊತೆಗೊಂದು ಸೆಲ್ಫಿ ತೆಗೆದುಕೊಳ್ಳದಿದ್ದರೆ ಹೇಗೆ? ಇತ್ತೀಚಿನ ದಿನಗಳಲ್ಲಿ ಇದು ಸರ್ವೇ ಸಾಮಾನ್ಯ. ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಲೈಕು, ಕಮೆಂಟ್ ಗಿಟ್ಟಸಿಕೊಳ್ಳವುದು, ನೆನಪಿಗಾಗಿ ಫೋಟೋ ತೆಗೆಸಿಕೊಳ್ಳುವಿದು ಪ್ರವಾಸಿಗರಿಗೆ ಅತ್ಯಂತ ಸಂತಸ. ಆದರೆ, ಇದೀಗ ಅರಮನೆಯಲ್ಲಿ ಸೆಲ್ಫಿ ಫೋಟೋಗೂ ಪೊಲೀಸರು ಬ್ರೇಕ್ ಹಾಕಿದ್ದಾರಂತೆ.

ಅರಮನೆಯ ಸೌಂದರ್ಯದೊಂದಿಗೆ ಫೋಟೋ ಸೆಷನ್‌ಗೆ ಪೊಲೀಸರ ತಡೆಯೊಡ್ಡುತ್ತಿದ್ದಾರಂತೆ. ಜಯಮರ್ತಾಂಡಾ‌ ದ್ವಾರದ ಬಳಿಯಲ್ಲೂ ಫೋಟೋ ತೆಗೆಯದಂತೆ ಪ್ರವಾಸಿಗರಿಗೆ ಪೊಲೀಸರು ತಾಕೀತು ಮಾಡುತ್ತಿದ್ದಾರಂತೆ. ಪೊಲೀಸರ ಈ ಕಿರಿಕ್‌ನಿಂದ ಪ್ರವಾಸಿಗರಿಗೆ ಭಾರೀ ನಿರಾಸೆಯಾಗುತ್ತಿದೆ.

ಪ್ರತಿನಿತ್ಯ 10-15 ಸಾವಿರ ಪ್ರವಾಸಿಗರು ಅರಮನೆಗೆ ಭೇಟಿ ಕೊಡುತ್ತಾರೆ, ವರ್ಷಕ್ಕೆ 35 ಲಕ್ಷಕ್ಕೂ ಅಧಿಕ‌ ಮಂದಿ ಅರಮನೆಯ ಸೌಂದರ್ಯ ವೀಕ್ಷಣೆಗೆ ಬರುತ್ತಾರೆ. ಪ್ರವಾಸಿಗರ ಭೇಟಿಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದ್ದರೂ, ಅರಮನೆಯ ಆವಣದಲ್ಲಿ ಫೋಟೋ ತೆಗೆಸಿಕೊಳ್ಳಲು ಪೊಲೀಸರಿಂದ ನಿತ್ಯ ಪ್ರವಾಸಿಗರೊಂದಿಗೆ ಕ್ಯಾತೆ. ಅರಮನೆ ಮಂಡಳಿಯ ಮುಖ್ಯ ಕಾರ್ಯದರ್ಶಿಗಳು ಅನುಮತಿ ನೀಡಿದ್ದರೂ ಪೊಲೀಸರು ಫೋಟೋ ತೆಗೆಯದಂತೆ ಅನಗತ್ಯ ಕಿರಿಕಿರಿ ನೀಡುತ್ತಿದ್ದಾರೆ. ಪ್ರವಾಸಿಗರ ಮೊಬೈಲ್ ಕಸಿದು ತೊಂದರೆ ಕೊಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ. ಅರಮನೆ ಆವರಣದಲ್ಲಿ ಫೋಟೋ ತೆಗೆಯಲು ನಿರ್ಬಂಧವಿಲ್ಲವೆಂದು ಅರಮನೆ ಮಂಡಳಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರೂ, ಪ್ರವಾಸಿಗರ ಮೇಲೆ ನಿರ್ಬಂಧ ಹಾಕುತ್ತಿರುವುದು ತಿಳಿದು ಬಂದಿದೆ. ಈ ಕುರಿತು ಸಂಬಂಧ ಪಟ್ಟವರು ಕ್ರಮ ಕೈಗೊಂಡು ಪ್ರವಾಸಿಗರಿಗೆ ಅನಗತ್ಯ ಕಿರಿಕಿರಿ ತಪ್ಪಿಸುವಂತೆ ಮನವಿಗಳು ಸಹ ಕೇಳಿ ಬಂದಿವೆ.


ಸಂಬಂಧಿತ ಟ್ಯಾಗ್ಗಳು

Mysore Palace selfie ನಿರ್ಬಂಧ ಸೌಂದರ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ