ಕೆಪಿಎಸ್ ಸಿ ಮತ್ತು ಲೋಕಾಯುಕ್ತ ಸಂಸ್ಥೆ ಹಾಳು ಮಾಡಿದ ಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತದೆ !

Kannada News

30-05-2017

ಬಾಗಲಕೋಟೆ:- ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷದ ಜೊತೆ ಹೊಂದಾಣಿಕೆ ಸಾಧ್ಯವೇ ಇಲ್ಲ. ಬಿಜೆಪಿ ಭ್ರಷ್ಟಾಚಾರದ ಸಸಿ ನೆಟ್ಟಿದೆ, ಆ ಸಸಿಗೆ ಕಾಂಗ್ರೆಸ್ ನೀರೆರೆಯುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಎರಡು ಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ. ಈ ಹಿಂದೆ ಬಿಜೆಪಿಗೆ ಹೋಗುವುದಿಲ್ಲ ಎಂದಿದ್ದ ಬಿಎಸ್ ವೈ ಈಗ ಹೋಗಿದ್ಯಾಕೆ? ಎಂದು ಪ್ರಶ್ನಿಸಿದ್ದಾರೆ. ಹೋದಲ್ಲೆಲ್ಲಾ ಮನೆ ಮಾಡೋ ವಿಚಾರದಲ್ಲಿ ಹೇಳಿಕೆ ನೀಡಿದ ಜಗದೀಶ ಶೆಟ್ಟರ್ ಗೆ ಟಾಂಗ್ ನೀಡಿದ ಕುಮಾರಸ್ವಾಮಿ, ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದಕ್ಕೆ ಶೆಟ್ಟರ್ ಗೆ ಆತಂಕ ಮನೆ ಮಾಡಿದೆ. ಹೀಗಾಗಿ ಏನೇನೋ ಮಾತಾಡ್ತಾರೆ, ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ. ಚುನಾವಣೆ ಗಿಮಿಕ್ ಗೋಸ್ಕರ ನಾನು ಮನೆ ಮಾಡಿಲ್ಲ. 2018ರ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರದ ಗದ್ದುಗೆ ಹಿಡಿಯಲಿದೆ. ನಮ್ಮ ಎದುರಾಳಿ ಬಿಜೆಪಿ ಮತ್ತು ಕಾಂಗ್ರೆಸ್ ಎಂದು ಕಟುವಾಗಿ ಟೀಕಿಸಿದ್ದಾರೆ. ಅಲ್ಲದೆ ಕೆಪಿಎಸ್ ಸಿ ಮತ್ತು ಲೋಕಾಯುಕ್ತ ಸಂಸ್ಥೆ ಹಾಳು ಮಾಡಿದ ಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತೆ. ಕೆಪಿಎಸ್ ಸಿಯನ್ನು ಮಾರಾಟ ಕೇಂದ್ರವನ್ನಾಗಿ ಮಾಡಿಕೊಂಡ ಕಾಂಗ್ರೆಸ್ ಸಕಾ೯ರ ಎಂದು ವಾಗ್ದಾಳಿ ನಡೆಸಿದರು. ಪಕ್ಷದಲ್ಲಿ ಪ್ರಾಮಾಣಿಕ, ಜನಸಂಪಕ೯ ಇರುವ  ಅಭ್ಯಥಿ೯ಗಳನ್ನ ಆಯ್ಕೆ ಮಾಡಲಿದ್ದೇವೆ. ಕೇಂದ್ರದ ಗೋಹತ್ಯೆ ಕಾನೂನು  ವಿಚಾರದಲ್ಲಿ ಪರವೂ ಇಲ್ಲ, ವಿರೋಧವೂ ಇಲ್ಲ. ಬರಗಾಲದಲ್ಲಿ ದನಗಳನ್ನ ಸಾಕುವ ವಿಚಾರದಲ್ಲಿ ರೈತನಿಗೆ ಪ್ರತಿವಷ೯ ೨೫ ಸಾವಿರ ನೋಡುವಂತಾಗಲಿ ಎಂದರು. ಎಸ್ ಐ ಟಿ ತನಿಖೆ ವಿಚಾರದಲ್ಲಿ ಹೇಳಿಕೆ ನೋಡಿರುವ ಅವರು, ನನ್ನ ಅವಧಿಯಲ್ಲಿ ಕಾನೂನು ಬಾಹೀರವಾಗಿ ಕೆಲಸ ಮಾಡಲು ಯಾವುದೇ ಅಧಿಕಾರಿಗೆ ನಾನು ಹೇಳಿಲ್ಲ. ಈ ಬಗ್ಗೆ ಹೆದರಿಕೆಯೂ ನನಗೆ ಇಲ್ಲ. ಬೇಕಾದ ತನಿಖೆಗೆ ನಾನು ಸಿದ್ದ ಎಂದಿದ್ದಾರೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ