ಉತ್ತರ ಕರ್ನಾಟಕ ಪ್ರತ್ಯೇಕತೆಗೆ ಖಂಡನೆ31-07-2018

ರಾಮನಗರ: ಉತ್ತರ ಕರ್ನಾಟಕ ಪ್ರತ್ಯೇಕತೆಗೆ ಪ್ರತಿಭಟನೆ ನಡೆಸುತ್ತಿರುವುದರ ವಿರುದ್ಧ ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲೆಯ ಚನ್ನಪಟ್ಟಣದ ಅಂಚೆ ಕಚೇರಿ ವೃತ್ತದ ಬಳಿ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತ್ಯೇಕತೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದೇ ವೇಳೆ ಬಿಜೆಪಿ ನಾಯಕ ಶ್ರೀರಾಮುಲು ಭಾವಚಿತ್ರಕ್ಕೆ‌ ಹಾಲು, ಮೋಸರಿನ ಅಭಿಷೇಕ ಮಾಡಿದ್ದು, ಮತ್ತೊಂದೆಡೆ ಶ್ರೀರಾಮುಲು ಅವರ ಭಾವಚಿತ್ರಕ್ಕೆ ಪೊರಕೆಯಲ್ಲಿ ಹೊಡೆದು, ಸಗಣಿ ಎರಚಿ ಪ್ರತ್ಯೇಕತೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಒಂದು ವೇಳೆ ರಾಜ್ಯ ಒಡೆಯುವ ಪ್ರಯತ್ನಕ್ಕೆ ಕೈಹಾಕಿದರೆ ಭಾವಚಿತ್ರಕ್ಕೆ‌ ಪೊರಕೆಯಲ್ಲಿ ಹೊಡೆದು, ಸಗಣಿ ಎರಚುತ್ತೇವೆಂದು ಎರಡೂ ರೀತಿಯ ಅಭಿಷೇಕ ಮಾಡಿದ್ದಾರೆ. ಕರ್ನಾಟಕ ಒಡೆಯಲು ಎದ್ದಿರುವ ಕೂಗಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

uttara karnataka protest ವೇದಿಕೆ ಅಭಿಷೇಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ