ಅಂಗನವಾಡಿ ಆಹಾರ ಸೇವಿಸಿ ಮಕ್ಕಳು-ಗರ್ಭಿಣಿಯರು ಅಸ್ವಸ್ಥ

Anganwadi Food consumed Children-Pregnant ladies admitted to hospital

31-07-2018

ಚಿತ್ರದುರ್ಗ: ಅಂಗನವಾಡಿಯಲ್ಲಿ ನೀಡಿದ ಆಹಾರ ಸೇವಿಸಿ 13 ಮಕ್ಕಳು ಸೇರಿದಂತೆ 15 ಮಂದಿ ಗರ್ಭಿಣಿಯರು ಅಸ್ವಸ್ಥರಾಗಿದ್ದಾರೆ. ಚಿತ್ರದುರ್ಗದ ಚಳ್ಳಕೆರೆ ತಾಲ್ಲೂಕಿನ ಹನುಮಂತ ಸಾಗರ ಗ್ರಾಮದಲ್ಲಿ ಘಟನೆ ನಡೆದಿದೆ.

ನಿನ್ನೆ ಮಧ್ಯಾಹ್ನ ಗ್ರಾಮದ ಅಂಗನವಾಡಿಯಲ್ಲಿ ಶೇಂಗಾ ಉಂಡೆ ಮತ್ತು ಅನ್ನ ಸಂಬಾರ್ ನೀಡಲಾಗಿದ್ದು, ಊಟ ಸೇವಿಸಿದ ಮಕ್ಕಳು-ಗರ್ಭಿಣಿಯರು ಅಸ್ವಸ್ಥರಾಗಿದ್ದಾರೆ. ವಾಂತಿ-ಭೇದಿಯಿಂದ ನರಳುತ್ತಿದ್ದ ಮಕ್ಕಳನ್ನು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲ್ಲೂಕು ದಂಡಾಧಿಕಾರಿ ಟಿ.ಕಾಂತರಾಜ್, ಮಹಿಳಾ ಮತ್ತು ಮಕ್ಕಳ‌ ಕಲ್ಯಾಣಾಧಿಕಾರಿ ರಾಜಾ ನಾಯ್ಕ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಸಧ್ಯ ಗರ್ಭಿಣಿಯರು ಮತ್ತು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಕುರಿದಂತೆ ನಿನ್ನೆ ಮಧ್ಯಾಹ್ನ ಮಾಡಿದ ಅಡುಗೆಯನ್ನು ಪರೀಕ್ಷೆಗಾಗಿ ಆಹಾರ ಇಲಾಖೆಯ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ ಚಳ್ಳಕೆರೆ ತಹಶೀಲ್ದಾರ್ ಕಾಂತರಾಜ್. ವರದಿ ಬಂದ ನಂತರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

anganwadi Food ತಹಶೀಲ್ದಾರ ಮಧ್ಯಾಹ್ನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ