ಮೆಡಿಕಲ್ ಶಾಪ್ ಇಂದು ಮಧ್ಯರಾತ್ರಿಯವರೆಗೂ ತೆರೆಯುವುದಿಲ್ಲ !

Kannada News

30-05-2017

ಹಾಸನ:-  ಜಿ ಎಸ್ ಟಿ ವಿರೋಧಿಸಿ ಮತ್ತು ಅನ್ ಲೈನ್ ಔಷಧ  ಮಾರಾಟ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ, ಹಾಸನ ಜಿಲ್ಲೆಯ ಎಲ್ಲಾ ಮೆಡಿಕಲ್ ಶಾಪ್ ಬಂದ್ ಮಾಡಲಾಗಿದೆ. ಅನ್ ಲೈನ್ ಔಷಧಿ ಮಾರಾಟ ನಿಲ್ಲಿಸಬೇಕು ಮತ್ತು ಕೇಂದ್ರ ಸರಕಾರದ ಜಿ ಎಸ್ ಟಿ ಹೊರೆಯನ್ನು ತಗ್ಗುಸಬೇಕು ಎಂದು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಹಾಸನ ಜಿಲ್ಲೆಯ ೫೫೦ ಮೆಡಿಕಲ್ ಶಾಪ್ ಇಂದು ಮಧ್ಯರಾತ್ರಿಯವರೆಗೂ ತೆರೆಯುವುದಿಲ್ಲ ಎಂದು ತಿಳಿಸಿದ್ದಾರೆ. ಜೀವ ರಕ್ಷಕ ಔಷಧಿ ಬೇಕಿದ್ದಲ್ಲಿ ಸರ್ಕಾರಿ ಆಸ್ಪತ್ರೆಗೆ ತೆರಳಲುವಂತೆ ಮನವಿ ಮಾಡಿದ್ದು, ಆಸ್ಪತ್ರೆಗೆ ಹೊಂದಿಕೊಂಡಿರುವ ಮೆಡಿಕಲ್ ಶಾಪ್ ಗಳಿಗೆ ಬಂದ್ ನಿಂದ ವಿನಾಯಿತಿ ನೀಡಲಾಗಿದೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ