ಬಾಂಬೆ ಸಲೀಂ ಬಂಧನ

police arrested bombay saleem!

30-07-2018

ಬೆಂಗಳೂರು: ಸುಮಾರು 40ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಮನೆಗಳ್ಳ ಬಾಂಬೆ ಸಲೀಂನನ್ನು ಬಂಧಿಸಿರುವ ಇಂದಿರಾನಗರ ಪೊಲೀಸರು ಆತನ ಇಬ್ಬರು ಸಹಚರರನ್ನು ಬಲೆಗೆ ಕೆಡವಿದ್ದಾರೆ.

ಇಂದಿರಾನಗರದ ಸಲೀಂ ಅಲಿಯಾಸ್ ಬಾಂಬೆ ಸಲೀಂ ಆತನ ಸಹಚರರಾದ ದನಂಜಯ್ ಮತ್ತು ರಾಜೇಶ್ ಬಂಧಿತ ಅರೋಪಿಗಳಾಗಿದ್ದಾರೆ. 37ಕ್ಕೂ ಹೆಚ್ಚು ಮನೆಗಳ್ಳತನ, ಮೂರು ಕೊಲೆ ಪ್ರಕರಣಗಳಲ್ಲಿ ಆರೋಪಿ ಸಲೀಂ ಅಲಿ ಭಾಗಿಯಾಗಿದ್ದಾನೆ. ತನ್ನದೇ ಆದ ಗ್ಯಾಂಗ್ ಕಟ್ಟಿಕೊಂಡು ಮನೆಳ್ಳತನ ನಡೆಸುತ್ತಿದ್ದ ಬಾಂಬೆ ಸಲೀಂ ಈ ಹಿಂದೆ ಜೈಲಿನಲ್ಲಿದ್ದಾಗಲೂ ತನ್ನ ಸಹಚರರಿಂದ ಕಳ್ಳತನ ಮುಂದುವರಿಸಿದ್ದ. ರಾಜಾಜಿನಗರ, ಶ್ರೀರಾಮಪುರ, ಪೀಣ್ಯಾ, ರಾಜಾಗೋಪಾಲನಗರ ಸೇರಿದಂತೆ ಹಲವು ಠಾಣೆಗಳಲ್ಲಿ ಬಾಂಬೆ ಸಲೀಂ ವಿರುದ್ಧ ಪ್ರಕರಣಗಳಿವೆ.

ಸಲೀಂ ಜೊತೆ ಬಂಧಿತರಾಗಿರುವ ಇಬ್ಬರು ಸಹಚರರು ಆತ ಹೇಳಿದಂತೆ ಬೀಗ ಹಾಕಿದ ಮನೆ ನೋಡಿ ಬಾಗಿಲು ಮುರಿದು ಕಳ್ಳತನ ಮಾಡುತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಬಾಂಬೆ ಸಲೀಂ ನಂತರ ತನ್ನ ಸಹಚರರನ್ನೂ ಜಾಮೀನು ಕೊಡಿಸಿ ಬಿಡುಗಡೆ ಮಾಡಿಸಿಕೊಂಡಿದ್ದ. ಆ ನಂತರ ಮತ್ತೆ ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಸಲೀಂ ಗ್ಯಾಂಗ್‍ ನಲ್ಲಿದ್ದ ಇತರ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

crime Robbery gang ಸಹಚರ ಗ್ಯಾಂಗ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ