ಒಂದೆಡೆ ಗೃಹಿಣಿ..ಮತ್ತೊಂದೆಡೆ ಉದ್ಯಮಿ ಮಹಿಳೆ ಆತ್ಮಹತ್ಯೆ

house wife and a woman committed suicide!

30-07-2018

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ನೇಣಿಗೆ ಶರಣಾಗಿರುವ ದುರ್ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಮಾಕ್ಷಿಪಾಳ್ಯದ ರಂಗನಾಥಪುರದ ನಾಗರತ್ನ (38)ಎಂದು ಆತ್ಮಹತ್ಯೆ ಮಾಡಿಕೊಂಡವರನ್ನು ಗುರುತಿಸಲಾಗಿದೆ. ಮಲ್ಲೇಶ್ ಎಂಬುವರನ್ನು ವಿವಾಹವಾಗಿದ್ದ ನಾಗರತ್ನಗೆ ಇಬ್ಬರು ಮಕ್ಕಳಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೇಸತ್ತ ನಾಗರತ್ನ ನಿನ್ನೆ ಮಧ್ಯಾಹ್ನ 4ರ ವೇಳೆ ಮನೆಯವರೆಲ್ಲ ಹೊರಗಡೆ ಹೋಗಿದ್ದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಮಾಕ್ಷಿಪಾಳ್ಯದ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ನಗರದ ಮತ್ತೊಂದೆಡೆ ಕೆ.ಆರ್.ಪುರಂನ ಅಶೋಕ್ ನಗರದ ಪ್ರಕಾಶ್ ಕುಮಾರ್ ಎನ್ನುವ ಮಹಿಳೆ ನಿನ್ನೆ ರಾತ್ರಿ ನೇಣಿಗೆ ಶರಣಾಗಿದ್ದು, ಕಾರಣ ತಿಳಿದು ಬಂದಿಲ್ಲ. ಅಶೋಕ್ ನಗರದ 16ನೇ ಮುಖ್ಯರಸ್ತೆ, ಮನೆಯಲ್ಲಿ ತುಮಾರ್ (28) ರಾತ್ರಿ 8.40ರ ವೇಳೆ ನೇಣಿಗೆ ಶರಣಾಗಿದ್ದಾರೆ. ಸಣ್ಣ ಉದ್ಯಮ ನಡೆಸುತ್ತಿದ್ದ ಅವರು ಹಲವು ವರ್ಷಗಳಿಂದ ಅಶೋಕ್ ನಗರದಲ್ಲಿ ವಾಸಿಸುತ್ತಿದ್ದರು. ಕೆ.ಆರ್.ಪುರಂ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

suicide women ಕೌಟುಂಬಿಕ ಕಲಹ ಉದ್ಯಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ