ಅಡುಗೆ ಸಿಲಿಂಡರ್ ಸ್ಪೋಟ: 6 ಮಂದಿಗೆ ಗಂಭೀರ ಗಾಯ

Five injured in cylinder blast at home

30-07-2018

ಬೆಂಗಳೂರು: ನಗರದ ಹೊರವಲಯದ  ಬೊಮ್ಮಸಂದ್ರದಲ್ಲಿ ಇಂದು ಬೆಳಿಗ್ಗೆ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು 6 ಮಂದಿ ಗಾಯಗೊಂಡಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡಿರುವ ವಿಜಯ್ ಕುಮಾರ್, ಬಲಭೀಮ, ಕಾಶಿನಾಥ್, ರಾಜಶೇಖರ್, ಗಣೇಶ್ ಮತ್ತು ಫಾತಿಮಾರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ ಎಲ್ಲರೂ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರಾಗಿದ್ದು, ಒಂದೇ ಕಡೆ ವಾಸಿಸುತ್ತಿದ್ದರು. ಬೆಳಿಗ್ಗೆ ಅಡುಗೆ ಮಾಡಲು ಮನೆಯವರು ಸ್ಟವ್ ಹಚ್ಚಿದಾಗ ರಾತ್ರಿ ಸೋರಿಕೆಯಾದ ಅನಿಲದಿಂದ ಈ ಸ್ಫೋಟವಾಗಿದೆ.

ಸ್ಫೋಟದ ತೀವ್ರತೆಗೆ ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು, ಮನೆಯ ಮುಂಬಾಗಿಲು ಛಿದ್ರವಾಗಿದೆ. ಘಟನೆ ನಡೆದ ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ