ಆರು ಜನರ ಗುಂಪೊಂದು ಪೊಲೀಸ್ ಪೇದೆ ಮೇಲೆ ಹಲ್ಲೆ

A group of 6 people assaulted the police constable

30-07-2018

ಬೆಂಗಳೂರು: ಯಲಹಂಕ ಉಪನಗರ ನಾಲ್ಕನೇ ಹಂತದಲ್ಲಿ ಅವಧಿ ಮೀರಿ ತೆರೆದಿದ್ದ ಹೊಟೇಲ್ ಬಳಿ ಗುಂಪು ಸೇರಿದ್ದವರನ್ನು ಪ್ರಶ್ನಿಸಲು ಹೋದ ಪೊಲೀಸ್ ಪೇದೆ ಸದಾಶಿವ ಕಾಂಬ್ಳೆ ಮೇಲೆ ಆರು ಮಂದಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ತಲೆ ಇನ್ನಿತರ ಭಾಗಗಳಿಗೆ ಗಾಯಗೊಂಡಿರುವ ಸದಾಶಿವ ಕಾಂಬ್ಳೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಸ್ಥಿತಿ ಗಂಭೀರವಾಗಿದೆ. ಹಲ್ಲೆ ನಡೆಸಿದ 6 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.

ಠಾಣೆಯಲ್ಲಿ ಕರ್ತವ್ಯ ಮುಗಿಸಿಕೊಂಡು ಸಾಮಾನ್ಯ ಉಡುಪಿನಲ್ಲಿ ನಿನ್ನೆ ರಾತ್ರಿ 12.30ರ ವೇಳೆ ಸದಾಶಿವ ಕಾಂಬ್ಳೆ ಅವರು ಮನೆಗೆ ಬೈಕ್‍ನಲ್ಲಿ ಹೋಗುತ್ತಿದ್ದರು ಮಾರ್ಗ ಮದ್ಯೆ ಯಲಹಂಕ ಉಪನಗರದ ನಾಲ್ಕನೇ ಹಂತದ ಕಿಚನ್ 6 ಹೊಟೇಲ್ ಬಳಿ ಗುಂಪು ಸೇರಿ ಜಗಳ ನಡೆಯುತ್ತಿತ್ತು.

ಕೂಡಲೇ ಬೈಕ್‍ನಿಲ್ಲಿಸಿ ಪ್ರಶ್ನಿಸಲು ಹೋದ ಸದಾಶಿವ ಕಾಂಬ್ಳೆ ಮೇಲೆ ಪೊಲೀಸ್ ಎಂದರೂ ಬಿಡದೇ ಮುಗಿಬಿದ್ದು ಹಲ್ಲೆ ನಡೆಸಿದ್ದಾರೆ. ಈ ಸಂಬಂದ ಮಾಹಿತಿ ಬಂದ ಹೆಚ್ಚಿನ ಸಿಬ್ಬಂದಿ ಧಾವಿಸಿ ಗಾಯಗೊಂಡಿದ್ದ ಸದಾಶಿವ ಕಾಂಬ್ಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿ ಹಲ್ಲೆ ನಡೆಸಿದ 6 ಮಂದಿಯನ್ನು ಯಲಹಂಕ ಉಪನಗರ ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ತಿಳಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

police constable assault ಪೊಲೀಸ್ ಪೇದೆ ಕರ್ತವ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ