ಪ್ರತ್ಯೇಕ ರಾಜ್ಯ ಬೇಡ: ಬಸವರಾಜ ರಾಯರೆಡ್ಡಿ

No separate state: Basavaraj rayareddy

30-07-2018

ಬೆಂಗಳೂರು: ಉತ್ತರ ಕರ್ನಾಟ ಪ್ರತ್ಯೇಕ ರಾಜ್ಯಕ್ಕೆ ಎದ್ದಿರುವ ಕೂಗಿನ ವಿರುದ್ಧ ಕಾಂಗ್ರೆಸ್‌ನ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆ ನೀಡಿದ್ದು, ‘ಮಠಾಧೀಶರಲ್ಲಿ ನನ್ನ‌ ಮನವಿ, ಈ ರೀತಿ ರಾಜ್ಯವನ್ನ ಒಡೆಯಬಾರದು. ಒಂದು ಪಕ್ಷ ಉತ್ತರ ಕರ್ನಾಟಕ ಅಭಿವೃದ್ಧಿಯಾಗಿಲ್ಲ ಅಂದರೆ ಕೂತು ಚರ್ಚೆ ಮಾಡೋಣ’ ಎಂದಿದ್ದಾರೆ.

ಇದೊಂದು ರಾಜಕೀಯ ಪ್ರೇರಿತ ಪಿತೂರಿ. ಆದರೆ ಪೂರ್ತಿ ಬಿಜೆಪಿ ಮಾಡುತ್ತಿದೆ ಎಂದು ಹೇಳಲ್ಲ. ಕೆಲವರು ಅಂದರೆ ಶ್ರೀರಾಮುಲು ಅಥವಾ ಉಮೇಶ್ ಕತ್ತಿ ಆಗಿರಬಹುದು. ಹೀಗಾಗಿ, ನಾನು ಈ ಬಗ್ಗೆ ಸಿಎಂ ಕುಮಾರಸ್ವಾಮಿಯವರಿಗೆ ಪತ್ರ ಬರೆದಿದ್ದೇನೆ ಎಂದು ರಾಯರೆಡ್ಡಿ ತಿಳಿಸಿದರು.

ಅದರೆ ಯಾರ್ಯಾರೋ ಮಾತು ಕೇಳಿಕೊಂಡು ಈ ರೀತಿ ಬಂದ್ ಮಾಡಬಾರದು. ದಯವಿಟ್ಟು ನಾನು ಮನವಿಯನ್ನ ಮಾಡುತ್ತಿದ್ದೇನೆ ಬಂದ್ ಗೆ ಯಾರೂ ಅವಕಾಶ ಕೊಡಬೇಡಿ. ಸಿಎಂ ಅವರು ಈ ಕೂಡಲೇ ಈ ಬಗ್ಗೆ ಸ್ವತಃ ಅವರೇ ಒಂದು ಮಾತನ್ನು ಹೇಳಬೇಕು ಎಂದು ಮನವಿ ಮಾಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ